back to top
20.2 C
Bengaluru
Saturday, July 19, 2025
HomeBusinessKaiga ದಲ್ಲಿ ಎರಡು Nuclear Power Units ನಿರ್ಮಾಣಕ್ಕೆ MEIL ಗೆ ಗುತ್ತಿಗೆ

Kaiga ದಲ್ಲಿ ಎರಡು Nuclear Power Units ನಿರ್ಮಾಣಕ್ಕೆ MEIL ಗೆ ಗುತ್ತಿಗೆ

- Advertisement -
- Advertisement -

ಹೈದರಾಬಾದ್ ಮೂಲದ ಮೇಘಾ ಎಂಜಿನಿಯರಿಂಗ್ ಅಂಡ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ (MEIL) ಸಂಸ್ಥೆಗೆ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಕೈಗಾ (Kaiga) ಪ್ರದೇಶದಲ್ಲಿ ಎರಡು ಅಣು ವಿದ್ಯುತ್ ಘಟಕಗಳನ್ನು (Nuclear Power Units) ನಿರ್ಮಿಸಲು ₹12,800 ಕೋಟಿ ಮೌಲ್ಯದ ಗುತ್ತಿಗೆ ಲಭಿಸಿದೆ.

ಈ ಗುತ್ತಿಗೆ ನ್ಯಾಷನಲ್ ಪವರ್ ಕಾರ್ಪೊರೇಶನ್ ಲಿಮಿಟೆಡ್ (NPCIL) ಸಂಸ್ಥೆ ನೀಡಿದ್ದು, ಇದುವರೆಗೆ ನೀಡಿರುವ ಅತಿದೊಡ್ಡ ಗುತ್ತಿಗೆಯಾಗಿದೆ. ಮುಂಬೈನ ಎನ್ಪಿಸಿಐಎಲ್ ಕಚೇರಿಯಲ್ಲಿ ಗುತ್ತಿಗೆಯ ಖರೀದಿ ಆದೇಶವನ್ನು ಎಂಇಐಎಲ್ ಸಂಸ್ಥೆಯ ನಿರ್ದೇಶಕರಾದ ಸುಬ್ಬಯ್ಯ ಅವರಿಗೆ ಹಸ್ತಾಂತರಿಸಲಾಗಿದೆ.

ಈ ಗುತ್ತಿಗೆ ಪ್ರಕಾರ, MEIL 700 ಮೆಗಾವಾಟ್ ಸಾಮರ್ಥ್ಯದ ಕೈಗಾ 5 ಮತ್ತು 6ನೇ ಅಣು ವಿದ್ಯುತ್ ಘಟಕಗಳನ್ನು ನಿರ್ಮಿಸುತ್ತದೆ. ಈ ಯೋಜನೆಯು ಎಂಜಿನಿಯರಿಂಗ್, ಖರೀದಿ ಮತ್ತು ನಿರ್ಮಾಣ (EPC) ಮಾದರಿಯಲ್ಲಿ ಅನುಷ್ಠಾನವಾಗುತ್ತದೆ.

ಈ ಗುತ್ತಿಗೆಗಾಗಿ NPCIL ಸಂಸ್ಥೆ ಗುಣಮಟ್ಟ ಮತ್ತು ವೆಚ್ಚ ಆಧಾರಿತ ಆಯ್ಕೆ ವಿಧಾನ (QCBS) ಅನುಸರಿಸಿದ್ದು, ಬಿಎಚ್ಇಎಲ್ ಹಾಗೂ ಎಲ್ ಅಂಡ್ ಟಿಂತಹ ಪ್ರತಿಷ್ಠಿತ ಕಂಪನಿಗಳನ್ನು ಹಿಂದಿಕ್ಕಿ ಎಂಇಐಎಲ್ ಗೆದ್ದಿದೆ.

ಈ ಯೋಜನೆಯು ಭಾರತದ ಇಂಧನ ಭದ್ರತೆಗಾಗಿ ಬಹುಮುಖ್ಯವಾಗಿದೆ. ಮಾಲಿನ್ಯರಹಿತ ವಿದ್ಯುತ್ ಉತ್ಪಾದನೆ ಹೆಚ್ಚಿಸಲು ಈ ರೀತಿಯ ಪರಮಾಣು ವಿದ್ಯುತ್ ಘಟಕಗಳು ಬಹುಮಾನ್ಯವಾಗಿದೆ. ಭವಿಷ್ಯದಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಳವಾಗಲಿರುವುದರಿಂದ, ಸರ್ಕಾರ ಇಂತಹ ಶುದ್ಧ ಶಕ್ತಿಸಾಧನಗಳಿಗೆ ಹೆಚ್ಚು ಆದ್ಯತೆ ನೀಡುತ್ತಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page