Chikkaballapur : ಚಿಕ್ಕಬಳ್ಳಾಪುರ ನಗರಕ್ಕೆ ನೀರು ಪೂರೈಸುವ ತಾಲ್ಲೂಕಿನ ಜಕ್ಕಲಮಡಗು ಜಲಾಶಯ (Jakkalamadagu Reservoir) ಕೋಡಿ ಹರಿದಿದ್ದು ಬುಧವಾರ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಜಲಾಶಯಕ್ಕೆ ಬಾಗಿನ (Bageena) ಅರ್ಪಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಪ್ರದೀಪ್ ಈಶ್ವರ್ “ಸರ್.ಎಂ.ವಿಶ್ವೇಶ್ವರಯ್ಯ ಅವರು 1955ರಲ್ಲಿ ಜಲಾಶಯವನ್ನು ನಿರ್ಮಿಸಿದ್ದು ಇದು ಚಿಕ್ಕಬಳ್ಳಾಪುರ ಮತ್ತು ದೊಡ್ಡಬಳ್ಳಾಪುರ ಭಾಗದ ಜನರ ಜೀವನಾಡಿ. ಈ ಜಲಾಶಯದ 67% ರಷ್ಟು ನೀರನ್ನು ಚಿಕ್ಕಬಳ್ಳಾಪುರ, 33% ರಷ್ಟು ನೀರನ್ನು ದೊಡ್ಡಬಳ್ಳಾಪುರಕ್ಕೆ ಪೂರೈಕೆ ಮಾಡಲಾಗುತ್ತಿದ್ದು ಇನ್ನೂ ಒಂದೂವರೆ ವರ್ಷ ಈ ಎರಡೂ ನಗರಗಳಿಗೆ ನೀರಿನ ಸಮಸ್ಯೆ ಇರುವುದಿಲ್ಲ. 2028ರ ವೇಳೆಗೆ ಜಲಾಶಯಕ್ಕೆ ಎತ್ತಿನಹೊಳೆ ನೀರು ಬರುತ್ತದೆ” ಎಂದು ತಿಳಿಸಿದರು.
ಕೋಚಿಮುಲ್ ನಿರ್ದೇಶಕ ಭರಣಿ ವೆಂಕಟೇಶ್ ಹಾಗೂ ಮುಖಂಡರು, ನಗರಸಭೆ ಅಧಿಕಾರಿಗಳು ಉಪಸ್ಥಿತರಿದ್ದರು.
For Daily Updates WhatsApp ‘HI’ to 7406303366
The post ಜಕ್ಕಲಮಡಗು ಜಲಾಶಯಕ್ಕೆ Pradeep Eshwar ಬಾಗಿನ ಅರ್ಪಣೆ appeared first on Chikkaballapur | Chikballapur | Chikkaballapura | ಚಿಕ್ಕಬಳ್ಳಾಪುರ ಸುದ್ದಿ.