Male Mahadeshwara Hills, Chamarajanagar: ಸಾಲೂರು ಬೃಹನ್ಮಠದ ಪೀಠಾಧಿಪತಿ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವದಲ್ಲಿ ಮಹದೇಶ್ವರ ಬೆಟ್ಟದ ಬಸ್ ನಿಲ್ದಾಣದಲ್ಲಿರುವ ವಾಣಿಜ್ಯ ಸಂಕೀರ್ಣದಲ್ಲಿ ಬುಧವಾರ ಮಲೆ ಮಹದೇಶ್ವರ ಸ್ವಾಮಿ ದೇವಾಲಯದ ಹುಂಡಿ ಎಣಿಕೆ (Hundi count) ನಡೆಯಿತು.
ಮಲೆ ಮಹದೇಶ್ವರ ಸ್ವಾಮಿ ದೇವಾಲಯದ (Male Mahadeshwara Swamy Temple) ಹುಂಡಿಯಲ್ಲಿ ₹ 10,07,001 ನಾಣ್ಯ ಹಾಗೂ ₹ 1,63,49,690 ನೋಟುಗಳು ಸೇರಿದಂತೆ ಒಟ್ಟು ₹1,73,56,69 ಸಂಗ್ರಹವಾಗಿದ್ದು, 56 ಗ್ರಾಂ ಚಿನ್ನ (Gold) ಹಾಗೂ 2.125 ಕೆ.ಜಿ ಬೆಳ್ಳಿ (Silver) ಪದಾರ್ಥ ಸಂಗ್ರಹವಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಶ್ರೀ ಮಲೆಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಸ್. ಕಾತ್ಯಾಯಿನಿ ದೇವಿ, ಉಪ ಕಾರ್ಯದರ್ಶಿ ಬಸವರಾಜು, ಲೆಕ್ಕ ಅಧೀಕ್ಷಕ ಪ್ರವೀಣ್ ಪಾಟೀಲ್ ಎಣಿಕೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.