ಕೇಂದ್ರ ಸರ್ಕಾರವು ಮತ್ತೊಮ್ಮೆ ಚೀನಾ ಸಂಬಂಧಿತ ಮೊಬೈಲ್ ಆಪ್ಸ್ (Mobile App Ban) ಮೇಲೆ ಡಿಜಿಟಲ್ ದಾಳಿ ನಡೆಸಿದೆ. ಈ ಬಾರಿ, 119 ಅಪ್ಲಿಕೇಶನ್ ಗಳನ್ನು ಏಕಕಾಲದಲ್ಲಿ ನಿಷೇಧಿಸಲಾಗಿದೆ. ಮುಖ್ಯವಾಗಿ, ಈ ಆಪ್ಸ್ ವಿಡಿಯೋ ಮತ್ತು ವಾಯ್ಸ್ ಚಾಟ್ ಸೇವೆಗಳಿಗೆ ಸೇರಿವೆ.
ಐಟಿ ಕಾಯ್ದೆಯ ಸೆಕ್ಷನ್ 69A ಅಡಿಯಲ್ಲಿ ನಿರ್ಬಂಧ: ನಿಷೇಧಿತ ಆಪ್ಸ್ ಜಾಗತಿಕ ಭದ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆ ಪ್ರಭಾವಿತ ಮಾಡುವ ಸಾಧ್ಯತೆಯಿಂದಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಇದರಲ್ಲಿ ಚೀನಾದಷ್ಟೇ ಅಲ್ಲ, ಸಿಂಗಾಪುರ, ಅಮೆರಿಕ, ಯುಕೆ ಮತ್ತು ಆಸ್ಟ್ರೇಲಿಯಾದ ಕೆಲವು ಅಪ್ಲಿಕೇಶನ್ ಗಳೂ ಸೇರಿವೆ.
ನಿಷೇಧಿತ 119 ಆಪ್ಸ್ ಪೈಕಿ, ಕೇವಲ 15 ಅನ್ನು ಮಾತ್ರ ಗೂಗಲ್ ಪ್ಲೇ ಸ್ಟೋರ್‌ನಿಂದ ತೆಗೆದುಹಾಕಲಾಗಿದೆ. ಸರ್ಕಾರ ಸಂಪೂರ್ಣ ಪಟ್ಟಿಯನ್ನು ಇನ್ನೂ ಬಹಿರಂಗಪಡಿಸಿಲ್ಲ.
ನಿಷೇಧಿತ ಆಪ್ಸ್‌ನ ಡೆವಲಪರ್‌ಗಳು ಈ ನಿರ್ಧಾರದಿಂದ ಬಳಕೆದಾರರಿಗೆ ತೊಂದರೆ ಆಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಕೆಲವು ಕಂಪನಿಗಳು ಭಾರತ ಸರ್ಕಾರದೊಂದಿಗೆ ಚರ್ಚಿಸಲು ಸಿದ್ಧವೆಂದು ತಿಳಿಸಿದ್ದಾರೆ.