Home News ಶಿವಮೊಗ್ಗದಲ್ಲಿ Mobile Tower ಕಳ್ಳತನ

ಶಿವಮೊಗ್ಗದಲ್ಲಿ Mobile Tower ಕಳ್ಳತನ

Shivamogga Mobile tower theft

Shivamogga: ಶಿವಮೊಗ್ಗ ನಗರದಲ್ಲಿ ಖಾಸಗಿ ಕಂಪನಿಯು ಜನರ ಅನುಕೂಲಕ್ಕಾಗಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಮೊಬೈಲ್ ಟವರ್ (Mobile tower) ಹಾಕಿತ್ತು.

ಶಿವಮೊಗ್ಗದ ಟಿಪ್ಪು ನಗರದ ಖಾಲಿ ಜಾಗದಲ್ಲಿ ಖಾಸಗಿ ಸಂಸ್ಥೆಯೊಂದು 2008ರಲ್ಲಿ ಮೊಬೈಲ್‌ ಟವರ್‌ ಅಳವಡಿಸಿತ್ತು. ಅದೇ ಸಂಸ್ಥೆ ಟವರ್‌ನ ನಿರ್ವಹಣೆ ಮಾಡುತ್ತಿತ್ತು. ಕೋವಿಡ್‌ ಸಂದರ್ಭ ನಿರ್ವಹಣೆ ಸಾಧ್ಯವಾಗಿರಲಿಲ್ಲ.

ಅದಾಗಿ ಬಹಳ ಸಮಯದ ನಂತರ ಸಂಸ್ಥೆಯವರು ಸ್ಥಳಕ್ಕೆ ಬಂದಾಗ ಮೊಬೈಲ್‌ ಟವರ್‌ ಮತ್ತು ಅದಕ್ಕೆ ಅಳವಡಿಸಿದ್ದ ಬಿಡಿ ಭಾಗಗಳೇ ನಾಪತ್ತೆಯಾಗಿವೆ!

ತುಂಗಾ ನಗರ ಠಾಣೆ ವ್ಯಾಪ್ತಿಯಲ್ಲಿ ಈ ಮೊಬೈಲ್ ಟವರ್ ಕಳ್ಳತನವಾಗಿದೆ. ಟವರ್ ಕಳ್ಳತನ ಕುರಿತು ಖಾಸಗಿ ಕಂಪನಿಯು ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದೆ.

ಈಗ ನ್ಯಾಯಾಲಯದ ಸೂಚನೆ ಮೇರೆಗೆ ತುಂಗಾ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಟವರ್‌ ಮತ್ತು ಬಿಡಿ ಭಾಗಗಳ ಅಂದಾಜು ಮೌಲ್ಯ 46.30 ಲಕ್ಷ ರೂ. ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಟವರ್​ಗೆ 10 ವರ್ಷದ ವರೆಗೆ ಪ್ರತಿ ತಿಂಗಳು 15 ಸಾವಿರ ರೂಪಾಯಿ ಬಾಡಿಗೆ ಬಗ್ಗೆ ಜಾಗದ ಮಾಲೀಕರ ನಡುವೆ ಕರಾರು ಆಗಿತ್ತು. ನಾಲ್ಕೈದು ವರ್ಷ ಬಾಡಿಗೆ ಪಾವತಿಸಲಾಗಿತ್ತು.

ನಂತರ ಖಾಸಗಿ ಕಂಪನಿಯವರು ಖಾಲಿ ಜಾಗದ ಮಾಲೀಕರಿಗೆ ಬಾಡಿಗೆ ನೀಡಿಲ್ಲ. ಇದರ ಬಳಿಕ ಟವರ್ ಬಗ್ಗೆ ಖಾಸಗಿ ಕಂಪನಿ ಮತ್ತು ಜಾಗದ ಮಾಲೀಕರು ನಿರ್ಲಕ್ಷ್ಯ ಮಾಡಿದ್ದಾರೆ.

ಲಕ್ಷಾಂತರ ರೂಪಾಯಿ ಮೌಲ್ಯದ ಮೊಬೈಲ್ ಟವರ್ ಕಳೆದ ನಾಲ್ಕು ವರ್ಷಗಳ ಹಿಂದೆ ದುರಸ್ತಿಗೆ ಬಂದಿತ್ತು. ಅದರ ರಿಪೇರಿ ಮಾಡುವ ಗೋಜಿಗೆ ಖಾಸಗಿ ಕಂಪನಿಯವರು ಹೋಗಿರಲಿಲ್ಲ.

ಮೊಬೈಲ್ ಟವರ್ ನಿಷ್ಕ್ರಿಯವಾಗಿರುವುದನ್ನು ಕಳ್ಳರು ಗಮನಿಸಿದ್ದಾರೆ. ಹಂತ ಹಂತವಾಗಿ ಟವರ್ ಬಿಡಿಭಾಗಗಳನ್ನು ಕಳ್ಳರು ಎಗರಿಸಿದ್ದಾರೆ. ಕಳೆದ ಒಂದೆರಡು ವರ್ಷಗಳ ಹಿಂದೆ ಮೊಬೈಲ್ ಟವರ್ ಖಾಲಿ ಜಾಗದಲ್ಲಿ ಇರಲಿಲ್ಲ. ಟವರ್ ಸಮೇತ ಕಳ್ಳರು ಅದನ್ನು ಎಗರಿಸಿದ್ದಾರೆ ಎನ್ನುವುದು ಖಾಸಗಿ ಕಂಪನಿಯ ಮಾಲೀಕರ ಆರೋಪವಾಗಿದೆ.

ಶಿವಮೊಗ್ಗ ನಗರದಲ್ಲಿ ಮೊಬೈಲ್ ಟವರ್ ಕಳ್ಳತನ ಪ್ರಕರಣವು ಸದ್ಯ ಅನೇಕ ಗೊಂದಲ ಮೂಡಿಸಿದೆ. ಖಾಸಗಿ ಕಂಪನಿ ಟವರ್ ಕಳ್ಳತನವಾಗಿದೆ ಎಂದು ದೂರು ನೀಡಿದರೆ, ಅತ್ತ ಟವರ್ ಹಾಕಿದ ಜಾಗದ ಮಾಲೀಕರು ಟವರ್ ಕಳ್ಳತನವಾಗಿಲ್ಲ ಎಂದಿರುವುದು ಅಚ್ಚರಿಗೆ ಕಾರಣವಾಗಿದೆ.

ಇದೀಗ ತುಂಗಾ ನಗರ ಪೊಲೀಸರು ಮೊಬೈಲ್ ಟವರ್ ಎಲ್ಲಿ ಹೋಯಿತು ಎಂಬುದನ್ನು ಪತ್ತೆ ಮಾಡಬೇಕಿದೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

You cannot copy content of this page

Exit mobile version