
Bengaluru (Bangalore) : ಕೊಮ್ಮಘಟ್ಟದ ಸಾರ್ವಜನಿಕರ ಸಮಾವೇಶದ ನಂತರ ನರೇಂದ್ರ ಮೋದಿ (Narendra Modi) ಯವರು ಕಳೆದ ಮಾರ್ಚ್ ತಿಂಗಳಲ್ಲಿ ರಷ್ಯಾ – ಉಕ್ರೇನ್ (Russia – Ukraine) ಯುದ್ಧದಲ್ಲಿ ಶೆಲ್ ದಾಳಿಯಿಂದ ಮೃತಪಟ್ಟಿದ್ದ ರಾಣಿಬೆನ್ನೂರು (Ranebennur) ತಾಲೂಕಿನ ಚಳಗೇರಿ ಗ್ರಾಮದ ನವೀನ್ ಶೇಕರಪ್ಪ (Naveen Shekarappa) ರವರ ಪೋಷಕರನ್ನು ಭೇಟಿ ಮಾಡಿ ಸಾಂತ್ವನ ತಿಳಿಸಿದರು.
ತಮ್ಮ ಮಗನ ಮೃತದೇಹವನ್ನು ಭಾರತಕ್ಕೆ ತರಿಸಿದಕ್ಕೆ ಪ್ರಧಾನಿಗಳಿಗೆ ಮತ್ತು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಯವರಿಗೆ ನವೀನ್ ತಂದೆ ಶೇಖರಪ್ಪ ತಾಯಿ ವಿಜಯಲಕ್ಷ್ಮಿ ಧನ್ಯವಾದ ತಿಳಿಸಿದರು.