ಕೇಂದ್ರ ಸರ್ಕಾರವು (Central Government) 85 ಹೊಸ ಕೇಂದ್ರೀಯ ವಿದ್ಯಾಲಯಗಳ (Kendriya Vidyalayas) ಸ್ಥಾಪನೆಗೆ ಅನುಮೋದನೆ ನೀಡಿದ್ದು, ಅದರಲ್ಲಿ ಕರ್ನಾಟಕಕ್ಕೆ ಮೂರು ಹೊಸ ವಿದ್ಯಾಲಯಗಳು ಸಿಗಲಿವೆ. ಶಿವಮೊಗ್ಗದ ಕೇಂದ್ರೀಯ ವಿದ್ಯಾಲಯವನ್ನು ವಿಸ್ತರಿಸುವ ಯೋಜನೆಗೂ ಸಹ ಅನುಮೋದನೆ ನೀಡಲಾಗಿದೆ.
85 ಕೇಂದ್ರೀಯ ವಿದ್ಯಾಲಯಗಳ ಸ್ಥಾಪನೆಗೆ ಮತ್ತು ವಿಸ್ತರಣೆಗಾಗಿ ₹5872.08 ಕೋಟಿ ಮೀಸಲಾಗಿದ್ದು, ಕರ್ನಾಟಕಕ್ಕೆ ಮೂರು ಹೊಸ ವಿದ್ಯಾಲಯಗಳು ಸಿಗಲಿವೆ. ಕೇಂದ್ರೀಯ ವಿದ್ಯಾಲಯದಲ್ಲಿ ಎಲ್ಲಾ ತರಗತಿಗಳಿಗೆ ತಲಾ ಎರಡು ಹೊಸ ಸೆಕ್ಷನ್‌ಗಳನ್ನು ಸೇರಿಸಲಾಗುವುದು. 82560 ಮಕ್ಕಳಿಗೆ ಪ್ರವೇಶಾವಕಾಶ ಮತ್ತು 5388 ಜನರಿಗೆ ಉದ್ಯೋಗ ಸೃಷ್ಟಿಯಾಗಲಿದೆ.
ಕರ್ನಾಟಕದ ಹೊಸ ಸ್ಥಳಗಳು
- ಯಾದಗಿರಿ ಜಿಲ್ಲೆ: ಮುದ್ನಾಳ್ ಗ್ರಾಮ.
- ಚಿತ್ರದುರ್ಗ ಜಿಲ್ಲೆ: ಕುಂಚಿಗನಾಳ ಗ್ರಾಮ.
- ರಾಯಚೂರು ಜಿಲ್ಲೆ: ಸಿಂಧನೂರು ತಾಲೂಕಿನ ಎಳರಗಿ (ಡಿ) ಗ್ರಾಮ.
ಪ್ರಧಾನಿ ಮೋದಿ ಅವರ ಅಧ್ಯಕ್ಷತೆಯಲ್ಲಿರುವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ.