New Delhi: ಪ್ರಧಾನಿ ನರೇಂದ್ರ ಮೋದಿ ಅವರು ಮಾಲ್ಡೀವ್ಸ್‌ಗೆ ನೀಡಿದ ಭೇಟಿಯಿಂದ ಭಾರತ ಮತ್ತು ಮಾಲ್ಡೀವ್ಸ್ (India-Maldives) ನಡುವಿನ ರಾಜತಾಂತ್ರಿಕ ಸಂಬಂಧಗಳಿಗೆ ಹೊಸ ತಿರುವು ಸಿಕ್ಕಿದೆ. ಪ್ರಧಾನಿ ಮೋದಿ ಮತ್ತು ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಬಾಂಧವ್ಯದ ಮಹತ್ವವನ್ನು ಉಲ್ಲೇಖಿಸಿದರು.
ಮೋದಿ ಮಾತನಾಡುತ್ತಾ ಹೇಳಿದರು, “ಭಾರತ ಮತ್ತು ಮಾಲ್ಡೀವ್ಸ್ ರಾಜತಾಂತ್ರಿಕ ಸಂಬಂಧಕ್ಕೆ 60 ವರ್ಷವಾದರೂ, ನಮ್ಮ ಸ್ನೇಹದ ಬೇರುಗಳು ಇತಿಹಾಸಕ್ಕಿಂತಲೂ ಹಳೆಯದು ಮತ್ತು ಸಾಗರದಷ್ಟು ಆಳವಾಗಿದೆ. ಭಾರತ ಯಾವಾಗಲೂ ಮಾಲ್ಡೀವ್ಸ್‌ನ ನಂಬಿಗಸ್ತ ಸ್ನೇಹಿತ. ಯಾವ ಸಂಕಷ್ಟ ಬಂದರೂ ಸಹಾಯಕ್ಕೆ ಧಾವಿಸೋದು ಭಾರತದ ಧರ್ಮ.”
ಉಭಯ ದೇಶಗಳ ಮಧ್ಯೆ ಸಹಿ ಹಾಕಲಾದ ಪ್ರಮುಖ ಒಪ್ಪಂದಗಳು
- ಮಾಲ್ಡೀವ್ಸ್‌ಗೆ ₹4,850 ಕೋಟಿ ಸಾಲ ನೀಡಲು ಭಾರತ ಒಪ್ಪಿಗೆ
- ಮಾಲ್ಡೀವ್ಸ್ ಸಾಲ ಮರುಪಾವತಿ ಬಾಧ್ಯತೆ ಶೇಕಡಾ 40ರಷ್ಟು ಇಳಿಕೆ
- ಭಾರತ-ಮಾಲ್ಡೀವ್ಸ್ ಮುಕ್ತ ವ್ಯಾಪಾರ ಒಪ್ಪಂದ ಮಾತುಕತೆಗಳಿಗೆ ಚಾಲನೆ
- UPI ಜಾರಿಗೆ ಸಂಬಂಧಿಸಿದ ಹಣಕಾಸು ಒಪ್ಪಂದ
- ಮೀನುಗಾರಿಕೆ, ಜಲಚರ ಸಾಕಣೆ ಮತ್ತು ಹವಾಮಾನ ಸಹಕಾರ ಒಪ್ಪಂದಗಳು
- ಮಾಲ್ಡೀವ್ಸ್‌ನಲ್ಲಿ 3,300 ವಸತಿ ಘಟಕಗಳ ಉದ್ಘಾಟನೆ
- 72 ವಾಹನಗಳ ಹಸ್ತಾಂತರ, ಹೆಲ್ತ್ ಕ್ಯೂಬ್ ಸೆಟ್ ನೀಡಿಕೆ
- ಮಾಲ್‌ನಲ್ಲಿ ರಕ್ಷಣಾ ಸಚಿವಾಲಯ ಕಟ್ಟಡ ಉದ್ಘಾಟನೆ
- ಡಿಜಿಟಲ್ ಪರಿವರ್ತನೆಗಾಗಿ ಸಹಕಾರ ಒಪ್ಪಂದ
ಮೋದಿ ಹೇಳಿದಂತೆ, “ನಾವು ಯಾವಾಗಲೂ ‘ಸ್ನೇಹ ಮೊದಲು’ ಎಂಬ ನಿಟ್ಟಿನಲ್ಲಿ ನಡೆದುಕೊಳ್ಳುತ್ತೇವೆ. ನಮ್ಮ ಸಂಬಂಧಗಳು ಸ್ಪಷ್ಟ ಮತ್ತು ಪ್ರಕಾಶಮಾನವಾಗಿರುತ್ತವೆ.”
ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಹೇಳಿದರು, “ಭಾರತದಿಂದ ಲಭಿಸುವ ಸಹಕಾರ ನಮ್ಮ ಅಭಿವೃದ್ಧಿಗೆ ತುಂಬಾ ನೆರವಾಗುತ್ತಿದೆ. ಮುಕ್ತ ವ್ಯಾಪಾರ ಒಪ್ಪಂದದಿಂದ ನಾವು ಹೆಚ್ಚು ವ್ಯಾಪಾರ ನಡೆಸುವಂತೆ ಮಾಡುತ್ತದೆ.”
ಮಹಮ್ಮದ್ ಮುಯಿಝು ಅಧಿಕಾರಕ್ಕೆ ಬಂದ ಬಳಿಕ ‘ಇಂಡಿಯಾ ಔಟ್’ ಅಭಿಯಾನದಿಂದಾಗಿ ಭಾರತ-ಮಾಲ್ಡೀವ್ಸ್ ಸಂಬಂಧ ಹದಗೆಟ್ಟಿತ್ತು. ಆದರೆ ಇದೀಗ ಮೋದಿ ಭೇಟಿಯಿಂದ ಈ ಸಂಬಂಧ ಮತ್ತಷ್ಟು ಬಲಪಡಿಸಿದೆ.