Ballari: ಬಳ್ಳಾರಿಯಲ್ಲಿ ಮತ್ತೊಂದು ಹಣ ದುಪ್ಪಟು ಮಾಡುವ ವಂಚನೆಯ (money doubling scam) ಪ್ರಕರಣ ಬೆಳಕಿಗೆ ಬಂದಿದೆ. ಕೋಟ್ಯಂತರ ರೂಪಾಯಿ ವಸೂಲಿ ಮಾಡಿ ಜನರನ್ನು ವಂಚಿಸಿ ಆರೋಪಿ ಪರಾರಿಯಾಗಿದ್ದಾನೆ. ಈತನ ಹೆಸರು ವಿಶ್ವನಾಥ್.
ವಿಶ್ವನಾಥ್ ಅಲ್ಪ ಬಡ್ಡಿಗೆ ಹಣ ಹೂಡಿದವರಿಗೆ ಕಡಿಮೆ ಲಾಭ, ಹೆಚ್ಚು ಹಣ ಹೂಡಿದವರಿಗೆ ಹೆಚ್ಚು ಲಾಭ ಸಿಗುತ್ತದೆ ಎಂಬ ನಂಬಿಕೆ ನೀಡಿ ಜನರಿಂದ ಹಣ ಸಂಗ್ರಹಿಸಿದ್ದ. ಈ ಮೂಲಕ ಸುಮಾರು 50 ಕೋಟಿಗೂ ಹೆಚ್ಚು ಹಣ ವಂಚಿಸಿರುವ ಬಗ್ಗೆ ಆರೋಪ ಕೇಳಿಬಂದಿದೆ.
ವಾಸವಿ ಸ್ವಗೃಹ ಹೋಮ್ ನೀಡ್ಸ್ ಆಂಡ್ ಕನ್ಸಲ್ಟನ್ಸಿ ಎಂಬ ಕಂಪನಿಯ ಹೆಸರಿನಲ್ಲಿ ವಿಶ್ವನಾಥ್ ಹಣ ಸಂಗ್ರಹಿಸಿದ್ದ. ಮೊದಲು ಕಿರಾಣಿ ಅಂಗಡಿ ಆರಂಭಿಸಿ, ಐದು ಸಾವಿರ ರೂ. ಮೌಲ್ಯದ ಕಿರಾಣಿ ತೆಗೆದುಕೊಂಡವರಿಗೆ ಎರಡು ಸಾವಿರ ರೂ. ಮೌಲ್ಯದ ಅಡುಗೆ ಎಣ್ಣೆ ಉಚಿತವಾಗಿ ನೀಡುತ್ತಿದ್ದರು. ಹದಿನೈದು ಸಾವಿರ ಕೊಟ್ಟರೆ ತಿಂಗಳ ಕೊನೆಯಲ್ಲಿ 20 ಸಾವಿರ ರೂ. ನೀಡುವುದಾಗಿ ಜನರನ್ನು ನಂಬಿಸುತ್ತಿದ್ದರು.
ಈ ರೀತಿ slowly ಜನರ ವಿಶ್ವಾಸ ಗೆದ್ದ ಅವರು, ಲಕ್ಷಾಂತರ ರೂಪಾಯಿ ಹೂಡಿಕೆ ಮಾಡುವಂತೆ ಆಮಿಷವೊಡ್ಡಿದರು. ಕೆಲವರು ಮೂರು ಲಕ್ಷ, ಐದು ಲಕ್ಷ, ಹತ್ತು ಲಕ್ಷ ರೂಪಾಯಿ ಹೂಡಿದ್ದರು.
ಪ್ರಕರಣ ಬೆಳಕಿಗೆ ಬಂದ ಬಳಿಕ, ವಿಶ್ವನಾಥ್ ಮನೆಗೆ ಬೀಗ ಹಾಕಿ ಪರಾರಿಯಾಗಿದ್ದಾರೆ. ವಂಚಿತರು ಬ್ರೂಸ್ ಪೇಟೆ ಪೊಲೀಸ್ ಠಾಣೆ ಮುಂದೆ ಸೇರಿ, “ನಮ್ಮ ಹಣಕ್ಕೆ ಯಾರು ಹೊಣೆ?” ಎಂಬ ಅಳಲಿನಲ್ಲಿ ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದಾರೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.