back to top
27 C
Bengaluru
Wednesday, September 17, 2025
HomeAutoಬೆಂಗಳೂರಿನಲ್ಲಿ Montra Electric dealership ಪ್ರಾರಂಭ

ಬೆಂಗಳೂರಿನಲ್ಲಿ Montra Electric dealership ಪ್ರಾರಂಭ

- Advertisement -
- Advertisement -

ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಪ್ರಚಾರ ಹೆಚ್ಚಾಗುತ್ತಿದ್ದಂತೆ, ಹಲವಾರು ಹೊಸ ಬ್ರಾಂಡ್ ಗಳು ಮಾರುಕಟ್ಟೆಗೆ ಪ್ರವೇಶಿಸುತ್ತಿವೆ. ಅದರಲ್ಲಿ ಮೋಂಟ್ರಾ ಎಲೆಕ್ಟ್ರಿಕ್ (Montra Electric) ಒಂದು. ಇದು ದಕ್ಷಿಣ ಭಾರತದಲ್ಲಿ ತನ್ನ ಮೊದಲ e-SCV ಡೀಲರ್ಶಿಪ್ ಅನ್ನು ಬೆಂಗಳೂರು ಯಶವಂತಪುರದಲ್ಲಿ ಪ್ರಾರಂಭಿಸಿದೆ.

ಯಶವಂತಪುರ ಕೈಗಾರಿಕಾ ಉಪನಗರ, ತುಮಕೂರು ರಸ್ತೆಯಲ್ಲಿ ಈ ಡೀಲರ್‌ಶಿಪ್  ಸ್ಥಾಪಿತವಾಗಿದೆ. ಇದು 3S (ಮಾರಾಟ, ಸೇವೆ, ಬಿಡಿಭಾಗಗಳು ಮತ್ತು ಚಾರ್ಜಿಂಗ್) ಸೌಲಭ್ಯವನ್ನು ಒದಗಿಸುತ್ತಿದೆ. ಟಿವಿಎಸ್ ವೆಹಿಕಲ್ ಮೊಬಿಲಿಟಿ ಸೊಲ್ಯೂಷನ್ ಪ್ರೈವೇಟ್ ಲಿಮಿಟೆಡ್ ಜೊತೆ ಪಾಲುದಾರಿಕೆ ಮಾಡಿಕೊಂಡು ಈ ಡೀಲರ್‌ಶಿಪ್ ಪ್ರಾರಂಭಿಸಲಾಗಿದೆ.


ಈ ಡೀಲರ್‌ಶಿಪ್ ನಲ್ಲಿ ಮೋಂಟ್ರಾ ಎಲೆಕ್ಟ್ರಿಕ್ನ ಹೊಸ EVIATOR ವಾಹನ ಲಭ್ಯವಿದ್ದು, ಇದು 245 ಕಿ.ಮೀ ಸಿಂಗಲ್ ಚಾರ್ಜ್ ರೇಂಜ್ ಮತ್ತು 170 ಕಿ.ಮೀ ರಿಯಲ್ ವರ್ಲ್ಡ್ ರೇಂಜ್ ನೀಡುತ್ತದೆ. 80 kW ಮೋಟಾರ್ ಮತ್ತು 300 Nm ಟಾರ್ಕ್ ಸಹಿತ ಇದು ಉತ್ತಮ ಕಾರ್ಯಕ್ಷಮತೆಯ ವಾಹನವಾಗಿದೆ.

ಈ ಹೊಸ ಡೀಲರ್‌ಶಿಪ್ ಮೂಲಕ, ಮೋಂಟ್ರಾ ಎಲೆಕ್ಟ್ರಿಕ್ ತನ್ನ ಸೇವಾ ಗುಣಮಟ್ಟವನ್ನು ಹೆಚ್ಚಿಸಲು ಹಾಗೂ ಗ್ರಾಹಕರ ಅನುಭವವನ್ನು ಉತ್ತಮಗೊಳಿಸಲು ಗುರಿ ಇಟ್ಟಿದೆ. EV ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಬಲಪಡಿಸುವ ಉದ್ದೇಶದಿಂದ, ಕಂಪನಿಯು ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page