Moodabidri (Mudbidri), Dakshina Kannada : ದಕ್ಷಿಣ ಕನ್ನಡ ಜಿಲ್ಲಾ ಭಾರತ್ ಸ್ಕೌಟ್ – ಗೈಡ್ಸ್ ಸಂಸ್ಥೆ (The Bharat Scouts and Guides) ಹಾಗೂ ಮೂಡುಬಿದಿರೆ ಸ್ಥಳೀಯ ಸಂಸ್ಥೆಯ ಸಹಭಾಗಿತ್ವದಲ್ಲಿ ರಾಜ್ಯ ಮಟ್ಟದ ರೋವರ್ಸ್, ರೇಂಜರ್ಸ್‌ಗಳಿಗೆ ನಡೆದ ಔಷಧೀಯ ಸಸ್ಯಗಳ ಮಾಹಿತಿ ಶಿಬಿರದಲ್ಲಿ (Medicinal Plants Information Camp) ಭಾರತ್ ಸ್ಕೌಟ್ಸ್ ಗೈಡ್ಸ್‌ನ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್ ಸಿಂಧ್ಯ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಪಿ.ಜಿ.ಆರ್ ಸಿಂಧ್ಯ ” ಪಿಲಿಕುಳದಲ್ಲಿರುವ ಜಿಲ್ಲಾ ಮಟ್ಟದ ಭಾರತ್ ಸ್ಕೌಟ್ಸ್ ಗೈಡ್ಸ್ ಸಂಸ್ಥೆಯನ್ನು ಅಭಿವೃದ್ಧಿಪಡಿಸಿ ಪ್ರವಾಸಿ ಕೇಂದ್ರವಾಗಿ ರೂಪಿಸುವ ಯೋಜನೆಯನ್ನು ಹೊಂದಿದ್ದೇವೆ” ಎಂದು ಹೇಳಿದರು.
ಭಾರತ್ ಸ್ಕೌಟ್ಸ್ ಗೈಡ್ಸ್ ಜಿಲ್ಲಾ ಆಯುಕ್ತ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ , ‘ಆಯುರ್ವೇದ ನಮ್ಮ ದೇಶದ ಬಹಳ ದೊಡ್ಡ ಸಂಪತ್ತಾಗಿರುವದರಿಂದ ಸಸ್ಯಗಳ ಬಗ್ಗೆಗಿನ ಜ್ಞಾನವನ್ನು ವಿದ್ಯಾರ್ಥಿಗಳು ಅರಿಯುವ ಅಗತ್ಯ ಇದೆ’ ಎಂದು ಹೇಳಿದರು .
ವಿದ್ಯಾರ್ಥಿ ದೆಸೆಯಿಂದಲೇ ಶಿಸ್ತು, ಸಂಯಮವನ್ನು ರೂಢಿಸಿಕೊಂಡಾಗ ಮಾತ್ರ ವ್ಯಕ್ತಿ ವಿಕಸನ ಸಾಧ್ಯವಾಗುತ್ತದೆ. ಎಂದು ಶಾಸಕ ಉಮಾನಾಥ್ ಕೋಟ್ಯಾನ್ ಶಿಬಿರದಲ್ಲಿ ತಿಳಿಸಿದರು.
ರಾಜ್ಯ ಸಂಘಟನಾ ಆಯುಕ್ತ ಎಂ.ಪ್ರಭಾಕರ ಭಟ್, ಜಿಲ್ಲಾ ಆಯುಕ್ತ ರಾಮಶೇಷ ಶೆಟ್ಟಿ, ಜಿಲ್ಲಾ ಗೈಡ್ಸ್ ಆಯುಕ್ತೆ ಶುಭಾ ವಿಶ್ವನಾಥ್, ಜಿಲ್ಲಾ ಸ್ಕೌಟ್ಸ್ ಸಂಘಟನಾ ಆಯುಕ್ತ ಶಾಂತರಾಮ್ ಪ್ರಭು, ಜಿಲ್ಲಾ ಕೋಶಾಧಿಕಾರಿ ಅನಿಲ್ ಕುಮಾರ್ ಜೆ., ಜಿಲ್ಲಾ ತರಬೇತಿ ಆಯುಕ್ತ ಪ್ರತಿಮ್ ಕುಮಾರ್, ರಾಜ್ಯ ಸಹ ಸಂಘಟನಾ ಆಯುಕ್ತ ಭರತ್ ರಾಜ್, ಶಿಬಿರ ನಾಯಕರಾದ ದೀಪಿಕಾ ಮತ್ತಿತರರು ಶಿಬಿರದಲ್ಲಿ ಪಾಲ್ಗೊಂಡಿದ್ದರು.