HomeNewsMoroccoಸಮುದ್ರ ದೋಣಿ ದುರಂತ: 50 ಮಂದಿ ಸಾವು

Moroccoಸಮುದ್ರ ದೋಣಿ ದುರಂತ: 50 ಮಂದಿ ಸಾವು

- Advertisement -
- Advertisement -


ಮೊರಾಕೊದ (Morocco) ಸಮುದ್ರದಲ್ಲಿ ದೋಣಿ ಮಗುಚಿದ ಪರಿಣಾಮ 50 ಮಂದಿ ಸಾವನ್ನಪ್ಪಿದ್ದಾರೆ. ಈ ದುರಂತದಲ್ಲಿ 40 ಪಾಕಿಸ್ತಾನಿಗಳು ಸೇರಿದ್ದಾರೆ. ಅಪಘಾತದಲ್ಲಿ 50ಕ್ಕೂ ಹೆಚ್ಚು ವಲಸಿಗರು ಜೀವ ಕಳೆದುಕೊಂಡಿರುವ ಶಂಕೆ ಇದೆ ಎಂದು ವಲಸೆ ಹಕ್ಕುಗಳ ಸಂಘಟನೆ ‘ವಾಕಿಂಗ್ ಬಾರ್ಡರ್ಸ್’ ಮಾಹಿತಿ ನೀಡಿದೆ.

ಮೊರೊಕನ್ ಅಧಿಕಾರಿಗಳು ದೋಣಿಯಲ್ಲಿದ್ದ 80 ಜನರಲ್ಲಿ 30 ಜನರನ್ನು ರಕ್ಷಿಸಿದ್ದಾರೆ. ಜನವರಿ 2ರಂದು ಮಾರಿಷಸ್ ನಿಂದ ಅಕ್ರಮವಾಗಿ ಸ್ಪೇನ್‌ಗೇ ತೆರಳಲು ಹೊರಟಿದ್ದ ದೋಣಿ ಈ ಅಪಘಾತಕ್ಕೀಡಾಗಿದೆ. ಮೃತರ ಗುರುತುವನ್ನು ದೃಢೀಕರಿಸಲು ಮತ್ತು ಬದುಕುಳಿದವರಿಗೆ ನೆರವು ನೀಡಲು ಪ್ರಯತ್ನಗಳು ನಡೆಯುತ್ತಿವೆ.

ಪಾಕಿಸ್ತಾನದ ವಿದೇಶಾಂಗ ಕಚೇರಿ ದುರಂತದ ಕುರಿತು ಹೇಳಿಕೆ ನೀಡಿದ್ದು, ಮೊರಾಕೊದಲ್ಲಿ ತನ್ನ ರಾಯಭಾರ ಕಚೇರಿಯನ್ನು ರಕ್ಷಣಾ ಕಾರ್ಯಾಚರಣೆಗೆ ನೆರವಾಗಲು ಸಜ್ಜುಗೊಳಿಸಿದೆ. ಪಾಕಿಸ್ತಾನಿ ಪ್ರಜೆಗಳಿಗೆ ಸಹಾಯ ಮಾಡಲು ದಖ್ಲಾದ ಸ್ಥಳಕ್ಕೆ ವಿಶೇಷ ತಂಡವನ್ನು ಕಳುಹಿಸಲಾಗಿದೆ.

ಪಾಕಿಸ್ತಾನ ಸರ್ಕಾರ ಬಿಕ್ಕಟ್ಟು ನಿರ್ವಹಣಾ ಘಟಕವನ್ನು ಸಕ್ರಿಯಗೊಳಿಸಿದ್ದು, ಪ್ರಧಾನ ಮಂತ್ರಿ ಮತ್ತು ವಿದೇಶಾಂಗ ಸಚಿವರು ಸಂತ್ರಸ್ತರಿಗೆ ನೆರವು ನೀಡಲು ಸಂಬಂಧಿತ ಸಂಸ್ಥೆಗಳಿಗೆ ನಿರ್ದೇಶನ ನೀಡಿದ್ದಾರೆ.

ಈ ದುರಂತದ ನಂತರ, ಮೊರಾಕೊ ಮತ್ತು ಪಾಕಿಸ್ತಾನ ಎರಡೂ ದೇಶಗಳು ಬಿಕ್ಕಟ್ಟಿನ ಪರಿಸ್ಥಿತಿಯನ್ನು ನಿಭಾಯಿಸಲು ಪರಸ್ಪರ ಸಹಕಾರದಿಂದ ಕೆಲಸ ಮಾಡುತ್ತಿವೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!