
Bengaluru: ಪ್ರಸಿದ್ಧ ಮೊಟೊರೊಲಾ ಕಂಪನಿಯು ಭಾರತದಲ್ಲಿ ತನ್ನ ಹೊಸ ಮೋಟೋ G86 ಪವರ್ 5G (Moto G86 Power 5G) ಸ್ಮಾರ್ಟ್‌ಫೋನ್ (Smartphone) ಅನ್ನು ಬಿಡುಗಡೆ ಮಾಡಿದೆ. ಈ ಫೋನ್‌ನಲ್ಲಿ 6,720mAh ಸಾಮರ್ಥ್ಯದ ದೈತ್ಯ ಬ್ಯಾಟರಿ ಇದೆ. ಜೊತೆಗೆ ಮೀಡಿಯಾಟೆಕ್ ಡೈಮೆನ್ಸಿಟಿ 7400 ಪ್ರೊಸೆಸರ್ ಬಳಕೆಯಾಗಿದೆ.
ಮುಖ್ಯ ವೈಶಿಷ್ಟ್ಯಗಳು
- 6.7 ಇಂಚಿನ AMOLED ಡಿಸ್ಪ್ಲೇ, 120Hz ರಿಫ್ರೆಶ್ ದರ
- ಗೊರಿಲ್ಲಾ ಗ್ಲಾಸ್ 7i ರಕ್ಷಣೆಯೊಂದಿಗೆ HDR10+ ಬೆಂಬಲ
- 8GB RAM + 128GB ಸ್ಟೋರೇಜ್ (1TB ವರೆಗೆ ವಿಸ್ತರಿಸಬಹುದಾದ ಮೈಕ್ರೋ SD ಕಾರ್ಡ್ ಸಪೋರ್ಟ್)
- ಆಂಡ್ರಾಯ್ಡ್ 15 ಆಧಾರಿತ ಹಲೋ UI
- 50MP ಸೋನಿ LYTIA-600 ಹಿಂಬದಿ ಕ್ಯಾಮೆರಾ
- 32MP ಸೆಲ್ಫಿ ಕ್ಯಾಮೆರಾ
- ಡಾಲ್ಬಿ ಆಡಿಯೋ ಬೆಂಬಲಿತ ಡ್ಯುಯಲ್ ಸ್ಪೀಕರ್‌ಗಳು
- 33W ಟರ್ಬೋಪವರ್ ಚಾರ್ಜಿಂಗ್ ಸಪೋರ್ಟ್
- IP68+IP69 ನೀರು ಮತ್ತು ಧೂಳಿನ ಪ್ರತಿರೋಧ ಶಕ್ತಿ
- ಇನ್-ಡಿಸ್ಪ್ಲೇ ಫಿಂಗರ್ಪ್ರಿಂಟ್ ಸೆನ್ಸರ್
ಬೆಲೆ ಮತ್ತು ಲಭ್ಯತೆ: 8GB RAM ಮತ್ತು 128GB ಸ್ಟೋರೇಜ್ ಆವೃತ್ತಿಯ ದರ ₹17,999. ಇದು ಆಗಸ್ಟ್ 6ರಿಂದ ಮೋಟೋರೊಲಾ ವೆಬ್‌ಸೈಟ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಿರುತ್ತದೆ.
ಮೋಟೋ G86 ಪವರ್ 5G ಫೋನ್ ಶಕ್ತಿಶಾಲಿ ಬ್ಯಾಟರಿ, ಉತ್ತಮ ಕ್ಯಾಮೆರಾ ಮತ್ತು ಹೊಸ ತಂತ್ರಜ್ಞಾನಗಳೊಂದಿಗೆ ಬಂದಿದೆ. ಇದನ್ನು ಮಧ್ಯಮ ಬೆಲೆಗೆ ಮಾರುಕಟ್ಟೆಯಲ್ಲಿ ಖರೀದಿ ಮಾಡಬಹುದಾಗಿದೆ.