ಮೊಜಾಂಬಿಕ್ನಲ್ಲಿ (Mozambique) ಅಧಿಕೃತ ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದಂತೆ, ಗಲಾಟೆಗಳು ಹೆಚ್ಚಾಗಿವೆ. ಈ ಸಮಯವನ್ನು ಉಪಯೋಗಿಸಿ 1,500 ಕೈದಿಗಳು ಜೈಲಿನಿಂದ ಪರಾರಿಯಾಗಿದ್ದಾರೆ. ರಾಜಧಾನಿ ಮಾಪುಟೊನಲ್ಲಿನ ಜೈಲಿನಲ್ಲಿ ನಡೆದ ಗಲಭೆಯಲ್ಲಿನ ಘರ್ಷಣೆಯಲ್ಲಿ 33 ಜನರು ಸಾವನ್ನಪ್ಪಿದ್ದು, 15 ಮಂದಿ ಗಾಯಗೊಂಡಿದ್ದಾರೆ.
ಜೈಲಿನಲ್ಲಿ ನಡೆದ ಗಲಾಟೆಯಿಂದಾಗಿ 1534 ಕೈದಿಗಳು ಪರಾರಿಯಾಗಿದ್ದು, 150 ಕೈದಿಗಳನ್ನು ಪುನಃ ಸೆರೆಹಿಡಿಯಲಾಗಿದೆ. ಮೊಜಾಂಬಿಕ್ನ ಇತರ ಎರಡು ಜೈಲುಗಳಲ್ಲಿ ಕೂಡ ಗಲಾಟೆಗಳ ವರದಿಗಳು ಬಂದಿವೆ. ಈ ಗಲಾಟೆಗಳ ನಡುವೆ ನೂರಾರು ಮಂದಿ ಸಾವನ್ನಪ್ಪಿದ್ದಾರೆ, ಆದರೆ ಹತ್ಯೆಯಾದವರ ಗುರುತು ಇನ್ನೂ ಸ್ಪಷ್ಟವಾಗಿಲ್ಲ.
ಹೈ-ಸೆಕ್ಯುರಿಟಿ ಜೈಲಿನಲ್ಲಿ ಪರಾರಿಯಾದ ಕೈದಿಗಳು ಸಶಸ್ತ್ರ ಗುಂಪುಗಳೊಂದಿಗೆ ಸಂಬಂಧ ಹೊಂದಿದ್ದರೆಂದು ತಿಳಿದುಬಂದಿದೆ. 1975 ರಿಂದ ಅಧಿಕಾರದಲ್ಲಿರುವ ಫ್ರೆಲಿಮೊ ಪಕ್ಷವು ಅಕ್ಟೋಬರ್ 9 ರ ಅಧ್ಯಕ್ಷೀಯ ಚುನಾವಣೆಯಲ್ಲಿ ಜಯ ಸಾಧಿಸಿದೆ ಎಂದು ನ್ಯಾಯಾಲಯ ದೃಢಪಡಿಸಿದೆ.
ಗಲಾಟೆಗಳು ಹೆಚ್ಚುತ್ತಿರುವುದರಿಂದ, ರಾಜಧಾನಿಯ ಹಲವು ಪ್ರದೇಶಗಳಲ್ಲಿ ಬ್ಯಾರಿಕೇಡ್ ಗಳು ಸ್ಥಾಪಿಸಲ್ಪಟ್ಟಿದ್ದು, ಅಂಗಡಿಗಳನ್ನು ಲೂಟಿ ಮಾಡಲಾಗಿದ್ದು, ಆಂಬ್ಯುಲೆನ್ಸ್ ಮತ್ತು ಮೆಡಿಕಲ್ ಸ್ಟೋರ್ಸ್ ಸೇರಿದಂತೆ ಹಲವು ಸೌಲಭ್ಯಗಳನ್ನು ಸುಟ್ಟುಹಾಕಲಾಗಿದೆ.