Home India Maharastra Mumbai: ಬೋಟ್ ಗೆ ನೌಕಾಪಡೆಯ ಸ್ಪೀಡ್ ಬೋಟ್ ಡಿಕ್ಕಿ, 13 ಸಾವು

Mumbai: ಬೋಟ್ ಗೆ ನೌಕಾಪಡೆಯ ಸ್ಪೀಡ್ ಬೋಟ್ ಡಿಕ್ಕಿ, 13 ಸಾವು

Mumbai Boat Accident

Mumbai: ಮುಂಬೈ ಗೇಟ್‌ವೇ ಆಫ್ ಇಂಡಿಯಾ (Gateway of India) ಸಮುದ್ರದ ಬಳಿ, ಪ್ರಯಾಣಿಕರಿದ್ದ ದೋಣಿಗೆ ನೌಕಾಪಡೆಯ ಸ್ಪೀಡ್ ಬೋಟ್ ಡಿಕ್ಕಿ ಹೊಡೆದು 13 ಮಂದಿ ಸಾವಿಗೀಡಾದ ಘಟನೆ ನಡೆದಿದೆ. ಸಿಬ್ಬಂದಿ ಸೇರಿದಂತೆ ಸುಮಾರು 110ಕ್ಕೂ ಹೆಚ್ಚು ಪ್ರಯಾಣಿಕರು ಹೊಂದಿದ್ದ ದೋಣಿ, ಗೇಟ್ವೇ ಆಫ್ ಇಂಡಿಯಾದಿಂದ ಎಲಿಫೆಂಟಾ ದ್ವೀಪಕ್ಕೆ ಹೊರಟಿತ್ತು. ಸಂಜೆ 5.15ರ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ.

ಸಾವನ್ನಪ್ಪಿದವರಲ್ಲಿ 10 ಮಂದಿ ಪ್ರಯಾಣಿಕರಾಗಿ, 3 ಮಂದಿ ನೌಕಾಪಡೆ ಸಿಬ್ಬಂದಿಯರು ಎಂದು ತಿಳಿದುಬಂದಿದೆ. ನೌಕಾಪಡೆಯ ಸ್ಪೀಡ್ ಬೋಟ್‌ ನ ಎಂಜಿನ್ ಪರೀಕ್ಷೆ ನಡೆಯುವ ಸಂದರ್ಭದಲ್ಲಿ, ಕಾರಂಜಾದ ಉರಾನ್ ಬಳಿ ‘ನೀಲ್ಕಮಲ್’ ದೋಣಿಗೆ ಬೋಟ್ ಡಿಕ್ಕಿ ಹೊಡೆದಿದೆ. ಈ ದುರಂತದ ಬಳಿಕ 101 ಮಂದಿಯನ್ನು ರಕ್ಷಿಸಲಾಗಿದ್ದು, ಭಾರತೀಯ ನೌಕಾಪಡೆಯ ನಾಲ್ಕು ಹೆಲಿಕಾಪ್ಟರ್‌ಗಳು, ಮೆರೈನ್ ಪೊಲೀಸ್, ಕೋಸ್ಟ್ ಗಾರ್ಡ್, ಸ್ಥಳೀಯ ಮೀನುಗಾರರು ಸೇರಿ ಭಾರಿ ರಕ್ಷಣಾ ಕಾರ್ಯಾಚರಣೆಯನ್ನು ನಡೆಸುತ್ತಿದ್ದಾರೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

You cannot copy content of this page

Exit mobile version