Mysuru (Mysore) : ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ (Deputy Commissioner Bagadi Gautham) ನೇತೃತ್ವದಲ್ಲಿ ನಡೆದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಮೈಸೂರಿನಲ್ಲಿ ಆಟೊ (Auto Rickshaw) ಪ್ರಯಾಣ ದರ ಹೆಚ್ಚಳಕ್ಕೆ ಅನುಮೋದನೆ ದೊರೆತಿದೆ.
ಮೊದಲ 1.9 km ಗೆ (3 ಪ್ರಯಾಣಿಕರಿಗೆ) ₹ 25 ಇದ್ದ ಸಾಮಾನ್ಯ ದರ ಈಗ ಈ ದರವನ್ನು ಪ್ರತಿ 2 km ಗೆ ₹ 30ಕ್ಕೆ ಹೆಚ್ಚಿಸಲಾಗಿದೆ. ಈ ಮೊದಲು ನಂತರದ ಪ್ರತಿ km ಗೆ ₹ 13 ಇದ್ದು ಈಗ ಅದು ₹ 15 ಆಗಿದೆ. ನಿರೀಕ್ಷಿಸುವ ದರ ಮೊದಲ ಐದು ನಿಮಿಷ ಉಚಿತವಾಗಿದ್ದರೆ, ನಂತರದ ಪ್ರತಿ 15 ನಿಮಿಷಕ್ಕೆ ₹ 5 ದರವನ್ನು ನಿಗದಿಪಡಿಸಲಾಗಿದೆ. 20 Kg ಯವರೆಗೂ ಸರಕು ಸಾಗಣೆಗೆ ಉಚಿತವಾಗಿದ್ದು ನಂತರ ಪ್ರತಿ 20 Kg ಗೆ ₹ 5 ರಂತೆ ದರ ನಿಗದಿಯಾಗಿದೆ.
ರಾತ್ರಿ 10 ರಿಂದ ನಸುಕಿನ 5 ಗಂಟೆಯವರೆಗೆ ಸಾಮಾನ್ಯದರ ಮತ್ತು ಸಾಮಾನ್ಯದರದ ಅರ್ಧಪಟ್ಟು ಹೆಚ್ಚು ಹಣ ನೀಡಬೇಕು ಪ್ರಾಧಿಕಾರವು ಸಾರ್ವಜನಿಕರಿಗೆ ಸೂಚಿಸಿದೆ.