back to top
28.2 C
Bengaluru
Saturday, August 30, 2025
HomeKarnatakaMysuruMysuru ಅರಮನೆಯತ್ತ Dasara ಗಜ ಪಡೆ ಪಯಣ

Mysuru ಅರಮನೆಯತ್ತ Dasara ಗಜ ಪಡೆ ಪಯಣ

- Advertisement -
- Advertisement -

Mysore (Mysuru) : ನಾಗರಹೊಳೆ ರಾಷ್ಟ್ರೀಯ ಉದ್ಯಾನ (Nagarahole Tiger Reserve) ವ್ಯಾಪ್ತಿಯ ಹುಣಸೂರು ತಾಲ್ಲೂಕಿನ ವೀರನಹೊಸಹಳ್ಳಿ (Veeranahosahalli) ಯಲ್ಲಿ ಭಾನುವಾರ ಜಂಬೂಸವಾರಿ (Dasara Jamboo Savari) ಯಲ್ಲಿ ಚಿನ್ನದ ಅಂಬಾರಿ ಹೊರುತ್ತಿರುವ ಅಭಿಮನ್ಯು ಸೇರಿ 9 ಆನೆಗಳಿಗೆ ಸಚಿವರಾದ ಎಸ್.ಟಿ.ಸೋಮಶೇಖರ್ (S. T. Somashekhar) , ಉಮೇಶ್ ಕತ್ತಿ (Umesh Katti) ತುಂತುರು ಮಳೆಯಲ್ಲೇ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿ ಗಜ ಪಯಣಕ್ಕೆ ಚಾಲನೆ ನೀಡಿದರು.

ಅರಮನೆ ಪುರೋಹಿತ ಪ್ರಹ್ಲಾದ್‌ ರಾವ್ ನೇತೃತ್ವದಲ್ಲಿ ಆನೆಗಳಿಗೆ ಪಂಚಫಲ, ಕಡುಬು, ಚಕ್ಕುಲಿ, ನಿಪ್ಪಟ್ಟು, ಹೋಳಿಗೆ, ಬೆಲ್ಲ, ಕಬ್ಬು, ಕಲ್ಲು ಸಕ್ಕರೆ, ಮೋದಕ ನೈವೇದ್ಯ ನೀಡಿ ‘ಶೋಡಷೋಪಚಾರ’ ಪೂಜೆ, ಗಣಪತಿ ಅರ್ಚನೆ ಜೊತೆ ವನದೇವತೆ, ಚಾಮುಂ ಡೇಶ್ವರಿಗೆ ಪ್ರಾರ್ಥನೆ ಸಲ್ಲಿಸಲಾಯಿತು.

ಮತ್ತಿಗೋಡು ಆನೆ ಶಿಬಿರದ ಅಭಿಮನ್ಯು, ಭೀಮ, ಮಹೇಂದ್ರ, ಗೋಪಾಲಸ್ವಾಮಿ, ಬಳ್ಳೆ ಶಿಬಿರದ ಅರ್ಜುನ, ದುಬಾರೆ ಶಿಬಿರದ ಧನಂಜಯ, ಕಾವೇರಿ, ರಾಮಪುರ ಆನೆ ಶಿಬಿರದ ಚೈತ್ರಾ, ಲಕ್ಷ್ಮಿ ಆನೆಗಳನ್ನು ಬಣ್ಣ ಮತ್ತು ಹೂಗಳಿಂದ ಅಲಂಕರಿಸಲಾಗಿತ್ತು. ಈ ಆನೆಗಳು August 10 ರಂದು ಅರಮನೆಗೆ ಆಗಮಿಸಲಿವೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page