Bengaluru: ಮೈಸೂರು ನಾಡಹಬ್ಬ ದಸರಾ (Mysuru Dasara) ಮಹೋತ್ಸವದ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ವಿಜೇತ ಲೇಖಕಿ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿರುವುದನ್ನು ಪ್ರಶ್ನಿಸಿ ಮಾಜಿ ಸಂಸದ ಪ್ರತಾಪ್ ಸಿಂಹ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಕೊಡಗು ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿರುವ ಸರ್ಕಾರದ ಆದೇಶವನ್ನು ಹಿಂಪಡೆಯಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ವಿಚಾರಣೆ ಇನ್ನಷ್ಟೇ ನಿಗದಿಯಾಗಿಲ್ಲ.
ಅರ್ಜಿಯಲ್ಲಿ ಹೇಳಿರುವುದು
- ಮೈಸೂರು ನಗರವನ್ನು ಮೊದಲಿಗೆ ಮಹಿಷಾಸುರನ ಆಳ್ವಿಕೆ ಮಾಡುತ್ತಿದ್ದ, ನಂತರ ಶಿವಪತ್ನಿ ಪಾರ್ವತಿ ದೇವಿ ಚಾಮುಂಡೇಶ್ವರಿಯಾಗಿ ಅವತಾರಗೊಂಡು ಚಾಮುಂಡಿ ಬೆಟ್ಟದಲ್ಲಿ ಮಹಿಷಾಸುರನನ್ನು ಸಂಹಾರ ಮಾಡಿದ್ದಾರೆ. ಇದರಿಂದ ‘ಮಹಿಷೂರು’ ಎಂದು ಹೆಸರಾಗಿತ್ತು. ಬ್ರಿಟಿಷರು ಬರುವುದರಿಂದ ‘ಮೈಸೂರು’ ಎಂದು ಹೆಸರು ಬದಲಾಯಿಸಲಾಯಿತು.
- ಮೈಸೂರು ಚಾಮುಂಡೇಶ್ವರಿಯನ್ನು ನಾಡದೇವಿ ಎಂದು ಕರೆಯಲಾಗುತ್ತಿದ್ದು, ಹಿಂದು ಧರ್ಮೀಯರಿಗೆ ಪವಿತ್ರ ಸ್ಥಳವಾಗಿದೆ. ದಸರಾ ಹಬ್ಬವನ್ನು ನಾಡ ಹಬ್ಬ ಎಂದು ಆಚರಿಸುತ್ತಾರೆ.
- ಆದರೆ 2025ರ ಆಗಸ್ಟ್ 23ರಂದು ರಾಜ್ಯ ಸರ್ಕಾರ ಬಾನು ಮುಷ್ತಾಕ್ ಅವರನ್ನು ದಸರಾ ಹಬ್ಬ ಉದ್ಘಾಟನೆಗೆ ಆಹ್ವಾನಿಸಿದೆ. ಬಾನು ಮುಷ್ತಾಕ್ ಅವರು ಬೇರೆ ಧರ್ಮಕ್ಕೆ ಸೇರಿದವರು ಮತ್ತು ಹಿಂದೂ/ಕನ್ನಡ ವಿರೋಧಿ ಹೇಳಿಕೆಗಳನ್ನು ನೀಡಿದವರು ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಅರ್ಜಿಯಲ್ಲಿ ಕೇಂದ್ರಬಿಂದುವಾಗಿ ಹೇಳಿದ್ದು
- ದಸರಾ ಉದ್ಘಾಟನೆ ಮುಖ್ಯವಾಗಿ ಹಿಂದು ಧಾರ್ಮಿಕ ಆಚರಣೆ, ಭಕ್ತಿಯೊಂದಿಗೆ ನೇರ ಸಂಬಂಧ ಹೊಂದಿದೆ.
- ಅತಿಥಿಗಳು ಚಾಮುಂಡೇಶ್ವರಿ ದೇವಿಯ ಗರ್ಭಗುಡಿಯ ಮುಂದೆ ಪೂಜಾ ಕಾರ್ಯಗಳಲ್ಲಿ ತೊಡಗಬೇಕು. ಬಾಹ್ಯರು ಭಾಗವಹಿಸುವುದು ಭಕ್ತರಿಗೆ ಕಳವಳಕಾರಿಯಾಗಿದೆ.
- ಧಾರ್ಮಿಕ ಆಚರಣೆ ಸಂವಿಧಾನ ಬದ್ಧ ಹಕ್ಕು; ಬಾನು ಮುಷ್ತಾಕ್ ಅವರನ್ನು ಆಹ್ವಾನಿಸುವುದು ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಉಲ್ಲಂಘನೆಯಂತೆ ತೋರುತ್ತದೆ.
- ದಸರಾ ಹಬ್ಬ ನೂರಾರು ವರ್ಷಗಳ ಸಂಪ್ರದಾಯ; ಸರ್ಕಾರದ ಈ ನಿರ್ಧಾರಕ್ಕೆ ತಡೆ ನೀಡಬೇಕು.
- ಸಾರ್ವಜನಿಕ ವಿರೋಧ ಮತ್ತು ಸಂಘರ್ಷ ತಡೆಯಲು ಮಧ್ಯಂತರ ತಡೆ ನೀಡಬೇಕು.
ಪ್ರತಾಪ್ ಸಿಂಹ ಅವರ ಅರ್ಜಿಯಂತೆ, ಸರ್ಕಾರದ ಈ ಕ್ರಮವು ಸಾಂಸ್ಕೃತಿಕ ಹಾಗೂ ಧಾರ್ಮಿಕ ಸಂಪ್ರದಾಯಗಳಿಗೆ ಹೊಂದಿಕೆಯಾಗುತ್ತಿಲ್ಲ. ಹೀಗಾಗಿ ಮಧ್ಯಂತರ ತಡೆ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.







