back to top
26.2 C
Bengaluru
Thursday, July 31, 2025
HomeIndiaMysuru: MUDA 160 ನಿವೇಶನಗಳನ್ನು ಜಪ್ತಿಗೆ ED ಆದೇಶ

Mysuru: MUDA 160 ನಿವೇಶನಗಳನ್ನು ಜಪ್ತಿಗೆ ED ಆದೇಶ

- Advertisement -
- Advertisement -


Mysuru: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (MUDA)ದ 160 ನಿವೇಶನಗಳನ್ನು ಜಪ್ತಿ ಮಾಡುವಂತೆ ಜಾರಿ ನಿರ್ದೇಶನಾಲಯ (ED) ಆದೇಶ ಹೊರಡಿಸಿದೆ. ಬೇನಾಮಿ ಮತ್ತು ಅಕ್ರಮ ಹಣ ವ್ಯವಹಾರ ನಡೆದಿದೆ ಎಂಬ ಶಂಕೆ ಹಿನ್ನೆಲೆಯಲ್ಲಿ ಈ ಆದೇಶ ನೀಡಲಾಗಿದೆ.

ಪ್ರತಿಯೊಂದು ನಿವೇಶನದ ಸರ್ಕಾರ ನಿರ್ಧರಿಸಿದ ಬೆಲೆ 81 ಕೋಟಿ ರೂ. ಆಗಿದ್ದು, ಮಾರುಕಟ್ಟೆ ಮೌಲ್ಯ 300 ಕೋಟಿ ರೂ.ಗಿಂತ ಅಧಿಕ ಎಂದು ಅಂದಾಜಿಸಲಾಗಿದೆ.

ನೋಂದಣಿ ವಿವರಗಳು

  • ರವಿ– 31 ನಿವೇಶನ (ಕುವೆಂಪುನಗರ, ದಟ್ಟಗಳ್ಳಿ, ವಿಜಯನಗರ)– ಸೆಪ್ಟೆಂಬರ್ 11, 2023
  • ಅಬ್ದುಲ್ ವಾಹಿದ್– 41 ನಿವೇಶನ (ವಿಜಯನಗರ, ಜೆ.ಪಿ.ನಗರ, ನಾಚನಹಳ್ಳಿಪಾಳ್ಯ)– ಮಾರ್ಚ್ 8, 2023, ಮತ್ತು ಸೆಪ್ಟೆಂಬರ್ 1, 2023
  • ಕ್ಯಾಥಡ್ರಾಲ್ ಸೊಸೈಟಿ– 40 ನಿವೇಶನ
  • ಇತರರು– 48 ನಿವೇಶನ

ಮುಡಾದಲ್ಲಿ ನಿವೇಶನ ಕೊಡಿಸುವುದಾಗಿ ಮಹಿಳೆಗೆ ವಂಚನೆ ಮಾಡಲಾಗಿದೆ. ಲಲಿತಾದ್ರಿಪುರ ಗ್ರಾಮದ ಮನಿಷಾ ಎಂಬವರಿಂದ 30 ಲಕ್ಷ ರೂ. ಪಡೆದು ನಿವೇಶನ ನೀಡದೇ ವಂಚನೆ ಮಾಡಿದ್ದಾರೆ. ಹಣ ವಾಪಸ್ ಕೇಳಿದಾಗ ಹಲ್ಲೆಗೈದ ಆರೋಪವಿದೆ. ಈ ಸಂಬಂಧ ಆಲನಹಳ್ಳಿ ಠಾಣೆಯಲ್ಲಿ ಪವಿತ್ರಾ, ಅವರ ಪತಿ ವಿಶ್ವನಾಥ್ ಶೆಟ್ಟಿ, ಮತ್ತು ಪುತ್ರನ ವಿರುದ್ಧ ಪ್ರಕರಣ ದಾಖಲಾಗಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page