Mysuru : ಶೃಂಗೇರಿಯ ವಿಧುಶೇಖರ ಭಾರತೀ ಸ್ವಾಮೀಜಿ (Sringeri Vidhushekhara Bharathi Swamiji) ಅವರನ್ನು ಮೈಸೂರು ಅರಮನೆಯ (Mysore Palace) ಜಯಮಾರ್ತಾಂಡ ದ್ವಾರದಿಂದ ಮಂಗಳವಾದ್ಯಗಳ ಸಮೇತ ಬೆಳ್ಳಿರಥದಲ್ಲಿ ಮಂಗಳವಾರ ಮೆರವಣಿಗೆ ಮಾಡಲಾಯಿತು. ಮೆರವಣಿಗೆ ಮಾಡಿದ ನಂತರ ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್ ಹಾಗೂ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ವಿಶೇಷ ಗೌರವ ಸಲ್ಲಿಸಿದರು.
ಮೆರವಣಿಗೆಗೂ ಮುನ್ನ ನಗರದಲ್ಲಿ ವಿಧುಶೇಖರ ಭಾರತೀ ಸ್ವಾಮೀಜಿ ವಿವಿಧ ದೇವಸ್ಥಾನಗಳು ಹಾಗೂ ವಿವಿಧ ಸಂಘ, ಸಂಸ್ಥೆಗಳಿಗೆ ಭೇಟಿ ನೀಡಿದರು. ಪಾದಪೂಜೆ ಹಾಗೂ ಭಿಕ್ಷಾವಂದನೆಗಳು ನಡೆದವು. ಸಂಜೆ ಗುರುವಂದನಾ ಕಾರ್ಯಕ್ರಮ ನಡೆಯಿತು.