Mysuru / Mysore : ಐತಿಹಾಸಿಕ 413ನೇ ಮೈಸೂರು ದಸರಾ (Mysuru Dasara)ಗೆ ನಮ್ಮ ದೇಶದ ಪ್ರಥಮ ಪ್ರಜೆ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಷನೆ ಸಲ್ಲಿಸುವ ಮೂಲಕ ವಿಧ್ಯುಕ್ತ ಚಾಲನೆ (Inauguration) ನೀಡಿದ್ದಾರೆ. ದಸರಾಗೆ ಚಾಲನೆ ನೀಡಿದ ಮೊದಲ ರಾಷ್ಟ್ರಪತಿ (President Of India) ಎಂಬ ಹೆಗ್ಗಳಿಕೆಗೆ ದ್ರೌಪದಿ ಮುರ್ಮು ರವರು ಪಾತ್ರರಾದರು. ಇಂದಿನಿಂದ 10 ದಿನಗಳ ಕಾಲ ದಸರಾ ಸಮಾರಂಭ ನಡೆಯಲಿದ್ದು ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ಮೈಸೂರಿನಲ್ಲಿ ನಡೆಯಲಿವೆ.
ದೇವಿ ಚಾಮುಂಡೇಶ್ವರಿಗೆ ನನ್ನ ನಮಸ್ಕಾರಗಳು ಎಂದು ಕನ್ನಡದಲ್ಲೇ ಭಾಷಣ ಪ್ರಾರಂಭಿಸಿದ ರಾಷ್ಟ್ರಪತಿ ಮುರ್ಮು “ಅನ್ಯಾಯ, ಅಧರ್ಮ, ಅಹಂಕಾರ ಸೋಲಿಸಲು ಅವತಾರ ತಾಳಿರುವ ದೇವಿಯ ಆಶೀರ್ವಾದ ಎಲ್ಲರ ಮೇಲಿರಲಿ ಎಂದು ಪ್ರಾರ್ಥಿಸಿದ್ದೇನೆ. ಕರ್ನಾಟಕ ಭಕ್ತಿ, ಸ್ವಾತಂತ್ರ್ಯಕ್ಕೆ ಹೆಸರುವಾಸಿಯಾಗಿದ್ದು ರಾಣಿ ಅಬ್ಬಕ್ಕ (Rani Abbakka Chowta), ಕಿತ್ತೂರು ರಾಣಿ ಚೆನ್ನಮ್ಮ (Kittur Chennamma), ಒನಕೆ ಓಬವ್ವ (Onake Obavva) ರಂತಹ ವೀರ ವನಿತೆಯರು ಈ ಮಣ್ಣಿನಲ್ಲಿ ಹುಟ್ಟಿದ್ದಾರೆ. ಕರ್ನಾಟಕದ ಸಂಸ್ಕೃತಿ ವಿಶ್ವವ್ಯಾಪಿಯಾಗಿದ್ದು, ದಸರಾ ಪರಂಪರೆ ಇಂದಿಗೂ ಮುಂದುವರಿಯುತ್ತಿದೆ. ರಾಜ್ಯ ಸರ್ಕಾರದ ಪ್ರಯತ್ನದಿಂದ ಮತ್ತಷ್ಟು ವೈಭಯದತ್ತ ಸಾಗುತ್ತಿದೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Thawar Chand Gehlot), ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai), ಸಚಿವ ಎಸ್.ಟಿ. ಸೋಮಶೇಖರ್ (S. T. Somashekhar), ಪ್ರಹ್ಲಾದ್ ಜೋಶಿ (Pralhad Joshi) ಮತ್ತಿತರರು ಉಪಸ್ಥಿತರಿದ್ದರು.