Bengaluru : ಬೋರಗಿಯ ನಬಿರೋಷನ್ ಪ್ರಕಾಶನ (Boragi Nabi Roshan Publications) ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ನಾವು ಭಾರತೀಯರು‘ (Naavu Bharatiyaru) ಶಿಶುಗೀತೆ ಪುಸ್ತಕ ಬಿಡುಗಡೆ (Kids Poems Book Release) ಹಾಗೂ ಆರಕ್ಷಕ ಸೇವಾರತ್ನ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಚಂದ್ರಶೇಖರ ಕಂಬಾರ (Chandrashekhara Kambara) ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಕಂಬಾರರು “ನಮ್ಮ ಸಾಂಸ್ಕೃತಿಕ ಅಖಂಡತೆ ಅರಿಯಲು ಮಾತೃ ಭಾಷಾ ಶಿಕ್ಷಣ ಬೇಕು. ಪೋಷಕರ ಆಂಗ್ಲ ಭಾಷಾ ಪ್ರೀತಿ ಕಡಿಮೆಯಾಗಿ ಮಕ್ಕಳಿಗೆ ಸ್ಥಳೀಯ ಭಾಷೆಯಲ್ಲಿ ಶಿಕ್ಷಣ ದೊರೆಯುವಂತಾಗಬೇಕು” ಎಂದು ಹೇಳಿದರು.
ವಿ. ನಾಗೇಂದ್ರ ಪ್ರಸಾದ್, ಮೌಲಾಲಿ ಕೆ. ಆಲಗೂರ, ಶ್ರೀಶೈಲ್ ಎಸ್.ಮೇಟಿ ಹಾಗೂ ಎಸಿಪಿ ಆರ್.ಎನ್. ನಿಖಿಲ್ ಕುಮಾರ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.