Tuesday, October 4, 2022
HomeKarnatakaMandyaಕಾಲಭೈರವೇಶ್ವರ ಸ್ವಾಮಿ ದೇವಾಲಯದ ಅಭಿವೃದ್ಧಿಗಾಗಿ ನೆರವು

ಕಾಲಭೈರವೇಶ್ವರ ಸ್ವಾಮಿ ದೇವಾಲಯದ ಅಭಿವೃದ್ಧಿಗಾಗಿ ನೆರವು

Nagamangala, Mandya : ನಾಗಮಂಗಲ ತಾಲ್ಲೂಕಿನ ಜೋಡಿನೇರಲೆಕೆರೆ ಗ್ರಾಮದಲ್ಲಿರುವ ಕಾಲಭೈರವೇಶ್ವರ ಸ್ವಾಮಿ ದೇವಾಲಯದ (Sri Kalabhairaveshwara Swamy Temple) ಅಭಿವೃದ್ಧಿಗಾಗಿ ಧರ್ಮಸ್ಥಳ ಟ್ರಸ್ಟ್‌ (Dharmasthala Trust) ನಿಂದ ₹ 1.5 ಲಕ್ಷ ಮೊತ್ತದ ಚೆಕ್ ಅನ್ನು SKDRDP ಟ್ರಸ್ಟ್‌ನ ತಾಲ್ಲೂಕು ಯೋಜನಾಧಿಕಾರಿ ಹೇಮಲತಾ ಹೆಗ್ದೆ ವಿತರಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಹೇಮಲತಾ ಹೆಗ್ದೆ “ದುರ್ಬಲರನ್ನು ಗುರ್ತಿಸಿ ಅವರನ್ನು ಸಬಲೀಕರಣಗೊಳಿಸುವ ಉದ್ದೇಶದಿಂದ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಟ್ರಸ್ಟ್‌ ಸ್ಥಾಪನೆಯಾಗಿದೆ. ಸಮಾಜದ ಹಿತ ಕಾಪಾಡುವ ಉದ್ದೇಶದಿಂದ ಅಸ್ತಿತ್ವಕ್ಕೆ ಬರುವ ಯಾವುದೇ ಸಂಘಸಂಸ್ಥೆಗಳ ಕಾರ್ಯ ಚಟುವಟಿಕೆಗಳೊಂದಿಗೆ ಉತ್ತಮವಾದ ಸಂಘಟನೆ ಮತ್ತು ಸಾಮರಸ್ಯ ಇದ್ದರೆ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಲು ಸಾಧ್ಯ.” ಎಂದು ಹೇಳಿದರು.

ದೇವಾಲಯದ ನಿರ್ವಹಣಾ ಸಮಿತಿ ಅಧ್ಯಕ್ಷ ಎನ್‌.ಎಸ್‌.ಮೂರ್ತಿ, ಉಪಾಧ್ಯಕ್ಷ ಬಸವರಾಜು, ಸೇವಾ ಪ್ರತಿನಿಧಿ ಶ್ವೇತಾ, ಮೇಲ್ವಿಚಾರಕ ಅವಿನಾಶ್, ಒಕ್ಕೂಟದ ಅಧ್ಯಕ್ಷ ಲಕ್ಷ್ಮಮ್ಮ ಕಾರ್ಯಕ್ರಮದಲ್ಲಿ ಭಾಗವಹಿಸಿ ತಾಲ್ಲೂಕು ಯೋಜನಾಧಿಕಾರಿ ಹೇಮಲತಾ ಹೆಗ್ದೆಯವರಿಗೆ ಸನ್ಮಾನಿಸಿದರು.

RELATED ARTICLES

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

- Advertisment -

Most Popular

Karnataka

India

You cannot copy content of this page