
Chikkaballapur : ಚಿಕ್ಕಬಳ್ಳಾಪುರ ನಗರದ ಸುಬ್ಬರಾಯನಪೇಟೆಯಲ್ಲಿ ಶುಕ್ರವಾರ ಶಾಸಕ ಪ್ರದೀಪ್ ಈಶ್ವರ್ ‘ನಮಸ್ತೆ ಚಿಕ್ಕಬಳ್ಳಾಪುರ’ (Namaste Chikkaballapur) ಕಾರ್ಯಕ್ರಮ ನಡೆಸಿದರು.
ಸಂಧರ್ಭದಲ್ಲಿ ಮಾತನಾಡಿದ ಶಾಸಕರು ” ಕಾಂಗ್ರೆಸ್ ಜಾತ್ಯತೀತ ಮತ್ತು ಬಡವರ ಪಕ್ಷ ಮನೆ ಮನೆಗೆ ಭೇಟಿ ನೀಡಿ ನಾನು ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಬಲಪಡಿಸುವೆ. ನಾನು ರಾಜೀನಾಮೆ ನೀಡಲು ಸಿದ್ಧ. ಆದರೆ ಅವರು ಸವಾಲು ಸ್ವೀಕರಿಸಿಲ್ಲ. ನನಗೆ ಪ್ರಶ್ನೆ ಪತ್ರಿಕೆ ನೀಡದೆಯೇ ಉತ್ತರ ತಪ್ಪು ಬರೆದಿದ್ದಾರೆ ಎಂದರೆ ಹೇಗೆ?. ನನ್ನ ವೆಬ್‌ಸೈಟ್‌ಗೆ ಸಾವಿರಾರು ದೂರುಗಳು ಬರುತ್ತಿವೆ. ಒಳಚರಂಡಿ ವ್ಯವಸ್ಥೆ ಸರಿಪಡಿಸಲಾಗುವುದು. ಖಾಲಿ ನಿವೇಶನಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವಂತೆ ಮಾಲೀಕರಿಗೆ ಸೂಚಿಸಲಾಗುವುದು. ಬೀದಿ ದೀಪಗಳನ್ನು ಅಳವಡಿಸಲಾಗುವುದು. ತೆಲಂಗಾಣ ಚುನಾವಣೆ ಮತ್ತು ಲೋಕಸಭೆ ಚುನಾವಣೆಯ ಕಾರ್ಯಗಳಲ್ಲಿ ತೊಡಗಿದ್ದರಿಂದ ‘ನಮಸ್ತೆ ಚಿಕ್ಕಬಳ್ಳಾಪುರ’ ಕಾರ್ಯಕ್ರಮ ಸಾಧ್ಯವಾಗಿರಲಿಲ್ಲ. ಇನ್ನು ಮುಂದೆ ನಿರಂತವಾಗಿ ನಡೆಯಲಿದೆ ” ಎಂದು ಹೇಳಿದರು.
ಸಂಧರ್ಭದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಅಧಿಕಾರಿಗಳು ಉಪಸ್ಥಿತರಿದ್ದರು.
For Daily Updates WhatsApp ‘HI’ to 7406303366
The post “ನಮಸ್ತೆ ಚಿಕ್ಕಬಳ್ಳಾಪುರ” ಕಾರ್ಯಕ್ರಮ appeared first on Chikkaballapur | Chikballapur | Chikkaballapura | ಚಿಕ್ಕಬಳ್ಳಾಪುರ.