back to top
25.2 C
Bengaluru
Wednesday, October 8, 2025
HomeBusinessNandi Betta Ropeway project ಗೆ ಗ್ರೀನ್ ಸಿಗ್ನಲ್!

Nandi Betta Ropeway project ಗೆ ಗ್ರೀನ್ ಸಿಗ್ನಲ್!

- Advertisement -
- Advertisement -

Bengaluru: ಚಿಕ್ಕಬಳ್ಳಾಪುರ ಜಿಲ್ಲೆಯ ಜನಪ್ರಿಯ ಪ್ರವಾಸಿ ಸ್ಥಳವಾದ ನಂದಿ ಬೆಟ್ಟದಲ್ಲಿ ರೋಪ್ ವೇ (Nandi Betta Ropeway project) ನಿರ್ಮಿಸಲು ಸರ್ಕಾರ ಹಾಕಿದ ಯೋಜನೆಗೆ ಈಗ ಕೇಂದ್ರ ಪರಿಸರ ಸಚಿವಾಲಯದಿಂದ ಷರತ್ತುಬದ್ಧ ಅನುಮೋದನೆ ಸಿಕ್ಕಿದೆ. ಮೇ ತಿಂಗಳಿನಲ್ಲಿ ನಿರ್ಮಾಣ ಕಾರ್ಯಾರಂಭಿಸಲು ಸರ್ಕಾರ ಸಜ್ಜಾಗಿದೆ.

ಈ ಯೋಜನೆ ಕಳೆದ ಕೆಲವು ಕಾಲದಿಂದ ನಿಂತ ಸ್ಥಿತಿಯಲ್ಲಿತ್ತು. ಇದೀಗ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಪರಿವೇಶ್ ಪೋರ್ಟಲ್ ಮೂಲಕ ಅರಣ್ಯ ಇಲಾಖೆಯ ನಿಯಮಗಳನ್ನು ಪಾಲಿಸುವ ಷರತ್ತಿನೊಂದಿಗೆ ಅನುಮೋದನೆ ನೀಡಲಾಗಿದೆ.

ಅರಣ್ಯ ಇಲಾಖೆಯ ನಿಯಮಗಳು ಯಾವುವು?

  • ನಂದಿ ಸ್ಟೇಟ್ ಫಾರೆಸ್ಟ್ ವ್ಯಾಪ್ತಿಯಲ್ಲಿ ನೀಲಗಿರಿ ಮರವನ್ನ ಬೇರೆ ಯಾವುದೇ ಮರವನ್ನು ಕಡಿಯಬಾರದು.
  • ಬ್ಲಾಸ್ಟಿಂಗ್ ಅಥವಾ ಡ್ರಿಲ್ಲಿಂಗ್ ಕಾರ್ಯಗಳನ್ನು ನಿಷೇಧಿಸಲಾಗಿದೆ.
  • ಕಾರ್ಮಿಕರನ್ನು ಅರಣ್ಯ ಇಲಾಖೆಯ ಮೇಲ್ವಿಚಾರಣೆಯಲ್ಲಿ ಮಾತ್ರ ಬಳಸಬೇಕು.
  • ರಸ್ತೆ ನಿರ್ಮಾಣ ಮತ್ತು ಜೆಸಿಬಿ ಯಂತ್ರಗಳ ಬಳಕೆ ಇಲ್ಲ.

ಯೋಜನೆಯ ಮುಖ್ಯ ಅಂಶಗಳು

  • ಉದ್ದ: 2.93 ಕಿ.ಮೀ
  • ವೆಚ್ಚ: ₹93.40 ಕೋಟಿ
  • ಉದ್ದೇಶ: ಪ್ರವಾಸಿಗರ ದಟ್ಟಣೆಯಿಂದ ಉಂಟಾಗುವ ಮಾಲಿನ್ಯವನ್ನು ಕಡಿಮೆ ಮಾಡುವುದು ಮತ್ತು ವಾಹನ ಸಂಚಾರದ ಬಿಕ್ಕಟ್ಟಿಗೆ ಪರಿಹಾರ ನೀಡುವುದು.
  • ಆರಂಭದ ಸ್ಥಳ: ನಂದಿ ಬೆಟ್ಟದ ಬುಡದಿಂದ
  • ವಿಸ್ತರಣೆ: ಸುಮಾರು 7 ಎಕರೆ, ಇದರಲ್ಲಿ 86 ಗುಂಟೆ ಅರಣ್ಯ ಭೂಮಿ ಸೇರಿದೆ
  • ಪೂರ್ಣಗೊಳ್ಳುವ ಗುರಿ: ಎಲ್ಲ ಅನುಮೋದನೆಗಳ ನಂತರ 1 ವರ್ಷದೊಳಗೆ ಕಾಮಗಾರಿ ಮುಗಿಸಲು ಉದ್ದೇಶ

ಈ ಯೋಜನೆ ನಿಗದಿತ ವೇಳೆಗೆ ಪೂರ್ಣಗೊಳ್ಳುವಂತೆ ಮಾಡಿದರೆ, ಇದು ಕರ್ನಾಟಕದ ಮೊದಲ ರೋಪ್ ವೇ ಯೋಜನೆಯಾಗಿ ಹೆಸರಾಗಲಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page