
Chikkaballapur : ಚಿಕ್ಕಬಳ್ಳಾಪುರ ತಾಲ್ಲೂಕಿನ ನಂದಿ ಗ್ರಾಮದಲ್ಲಿ,ಪ್ರತಿ ವರ್ಷ ಆಷಾಢ ಮಾಸದ ಕೊನೆ ಸೋಮವಾರ ನಡೆಯುವ ನಂದಿಗಿರಿ ಪ್ರದಕ್ಷಿಣೆಯಲ್ಲಿ (Nandi Giri Pradakshina) ಈ ವರ್ಷವೂ ಸಾವಿರಾರು ಭಕ್ತರು ಭಾಗವಹಿಸಿದರು.
85ನೇ ವರ್ಷದ ಈ ಕಾರ್ಯಕ್ರಮ ನಂದಿಗಿರಿ ಪ್ರದಕ್ಷಿಣಾ ಸೇವಾ ಟ್ರಸ್ಟ್ ನೇತೃತ್ವದಲ್ಲಿ ನಡೆಯಿತು. ಭೋಗನಂದೀಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಶಿವನಾಮ ಜಪ, ಭಜನೆಗಳೊಂದಿಗೆ ಸುಮಾರು 15 ಕಿ.ಮೀ ದೂರದ ಪಾದಯಾತ್ರೆ ನಡೆಸಲಾಯಿತು.
ದೊಡ್ಡಬಳ್ಳಾಪುರ, ದೇವನಹಳ್ಳಿ, ಬೆಂಗಳೂರು ಸೇರಿದಂತೆ ವಿವಿಧ ಕಡೆಗಳಿಂದ ಭಕ್ತರು ಬಂದು, ಕಾರಹಳ್ಳಿ ಕ್ರಾಸ್, ಹೆಗ್ಗಡಿಹಳ್ಳಿ ಮಾರ್ಗವಾಗಿ ಪೂಜಾ ಸ್ಥಳಕ್ಕೆ ಹಿಂದಿರುಗಿದರು.
ಪಾದಯಾತ್ರೆಗೆ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಊಟ, ಉಪಾಹಾರ, ನೀರಿನ ವ್ಯವಸ್ಥೆ ನಡೆದಿದ್ದು, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಸದಸ್ಯರು ಕಲ್ಲಂಗಡಿ ಹಣ್ಣು ವಿತರಿಸಿದರು.
For Daily Updates WhatsApp ‘HI’ to 7406303366
The post 85ನೇ ನಂದಿಗಿರಿ ಪ್ರದಕ್ಷಿಣೆ appeared first on Chikkaballapur | Chikballapur | Chikkaballapura Latest Breaking New Stories | ಚಿಕ್ಕಬಳ್ಳಾಪುರ ಸುದ್ದಿ.