Nanjangud, Musuru (Mysore) : ನಂಜನಗೂಡು ತಾಲ್ಲೂಕಿನ ಹೆಡಿಯಾಲ ಗ್ರಾಮದ (Hediyala Village) ಕುದುರೆಗುಂಡಿ ಹಳ್ಳದ ಬಳಿ ಆಹಾರಕ್ಕೆಂದು ಬಂದು ಅಸ್ವಸ್ಥಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಹೆಣ್ಣಾನೆ (Elephant) ಬುಧವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿತು (Death).
ಆಹಾರ ಹುಡುಕಿಕೊಂಡು ಕಾಡಿನಿಂದ ಬಂದಿದ್ದ ಆನೆ ಕುದುರೆಗುಂಡಿ ಬಳಿ ಅಸ್ವಸ್ಥಗೊಂಡಿತ್ತು. ಆನೆಗೆ ಮಂಗಳವಾರ ಡಾ.ವಸೀಂ ಚಿಕಿತ್ಸೆ ನೀಡಿದರಾದರೂ ಆನೆಯ ಆರೋಗ್ಯದಲ್ಲಿ ಚೇತರಿಕೆ ಕಾಣಲಿಲ್ಲ. ಸಾವನ್ನಪ್ಪಿದೆ ಆನೆಯನ್ನು ಸ್ಥಳದಲ್ಲೇ ಮಣ್ಣು ಮಾಡಿ ಅಂತ್ಯಕ್ರಿಯೆ ನಡೆಸಲಾಯಿತು. ಸ್ಥಳದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ರವಿಕುಮಾರ್, ವಲಯ ಅರಣ್ಯಾಧಿಕಾರಿಗಳಾದ ಮಂಜುನಾಥ್, ವಲಯ ಅರಣ್ಯಾಧಿಕಾರಿ ಗೀತಾ ಉಪಸ್ಥಿತರಿದ್ದರು.