back to top
24 C
Bengaluru
Saturday, August 30, 2025
HomeKarnatakaChikkaballapuraAthletics ಕ್ರೀಡಾಕೂಟದಲ್ಲಿ National College ವಿದ್ಯಾರ್ಥಿಗಳ ಸಾಧನೆ

Athletics ಕ್ರೀಡಾಕೂಟದಲ್ಲಿ National College ವಿದ್ಯಾರ್ಥಿಗಳ ಸಾಧನೆ

- Advertisement -
- Advertisement -

Bagepalli, Chikkaballapur : ಬಾಗೇಪಲ್ಲಿಯ ನ್ಯಾಷನಲ್ ಕಾಲೇಜಿನ (National College) ವಿದ್ಯಾರ್ಥಿಗಳು ಡಿಸೆಂಬರ್ 28, 29 ರಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯ (Bengaluru North University) ಚಿಕ್ಕಬಳ್ಳಾಪುರದಲ್ಲಿ ಆಯೋಜಿಸಿದ್ದ 2021-22ನೇ ಸಾಲಿನ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ (Athletics Championship) ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕಗಳನ್ನು ಪಡೆದಿದ್ದಾರೆ.

ಕಾಲೇಜಿನ ಅಂತಿಮ BSc ಪದವಿಯ ಪವನ್ ಕುಮಾರ್ 100 ಮೀ, 200 ಮೀಟರ್ ಓಟದಲ್ಲಿ ಪ್ರಥಮ ಸ್ಥಾನಗಳಿಗೆ 2 ಚಿನ್ನದ ಪದಕ ಪಡೆದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದಲ್ಲಿ ವೇಗದ ಓಟಗಾರ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಬಿಕಾಂನ ರಮ್ಯಾ ಆಫ್ ಮ್ಯಾರಥಾನ್ ಓಟದಲ್ಲಿ ತೃತೀಯ ಸ್ಥಾನ ಪಡೆದು ಕಂಚಿನ ಪದಕ ಪಡೆದಿದ್ದಾರೆ. ಪ್ರಥಮ ಬಿಕಾಂನ ರಕ್ಷಿತ್ ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪದಕ ಪಡೆದಿದ್ದಾರೆ. ಲಕ್ಷ್ಮೀಪತಿ, ರಾಮ, ಶ್ರೀನಾಥ್, ಸಿ. ಹರೀಶ್ ರಿಲೇ ಓಟದಲ್ಲಿ ತೃತೀಯ ಸ್ಥಾನ ಪಡೆದು ಕಂಚಿನ ಪದಕ ಪಡೆದಿದ್ದಾರೆ ಎಂದು ಕಾಲೇಜಿನ ಡಾ.ಕೆ.ಪಿ.ನಾರಾಯಣಪ್ಪ ಹಾಗೂ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಕೆ.ಟಿ.ವೀರಾಂಜನೇಯ ತಿಳಿಸಿದರು.

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page