back to top
20.2 C
Bengaluru
Saturday, August 30, 2025
HomeIndiaNational Space Day 2025: ಭಾರತದ ಯಶೋಗಾಥೆ

National Space Day 2025: ಭಾರತದ ಯಶೋಗಾಥೆ

- Advertisement -
- Advertisement -

2023ರ ಆಗಸ್ಟ್ 23ರಂದು ಭಾರತ ಚಂದ್ರನ ಮೇಲೆ ಇಳಿದ ನಾಲ್ಕನೇ ದೇಶವಾಗಿದ್ದು, ದಕ್ಷಿಣ ಧ್ರುವ ತಲುಪಿದ ಪ್ರಪಂಚದ ಮೊದಲ ರಾಷ್ಟ್ರವಾಯಿತು. ಈ ಸಾಧನೆಯನ್ನು ಸ್ಮರಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿವರ್ಷ ಆಗಸ್ಟ್ 23ನ್ನು ‘ರಾಷ್ಟ್ರೀಯ ಬಾಹ್ಯಾಕಾಶ ದಿನ’ (National Space Day) ಎಂದು ಘೋಷಿಸಿದರು. ಇಂದು ದೇಶವು ಎರಡನೇ ಬಾಹ್ಯಾಕಾಶ ದಿನವನ್ನು ಆಚರಿಸುತ್ತಿದೆ.

ಇಸ್ರೋ ಸಾಧನೆಗಳು

  • 2014–2025ರ ನಡುವೆ 58 ಉಡಾವಣೆಗಳು ನಡೆದಿದ್ದು, ಇದು ಹಿಂದಿನ 42 ಉಡಾವಣೆಗಳಿಗಿಂತ ಶೇಕಡಾ 38 ಹೆಚ್ಚು.
  • ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ 21ನೇ ಶತಮಾನದಲ್ಲಿ ಮುಖ್ಯ ಆಟಗಾರನಾಗಿ ಹೊರಹೊಮ್ಮಿದೆ.

ಮಂಗಳಯಾನ ಮಿಷನ್: ಭಾರತ ಮೊದಲ ಪ್ರಯತ್ನದಲ್ಲೇ ಮಂಗಳನ ಅಂಗಳ ತಲುಪಿತು. ಕೇವಲ 74 ಮಿಲಿಯನ್ ಡಾಲರ್ ವೆಚ್ಚದಲ್ಲಿ ಈ ಮಿಷನ್ ಯಶಸ್ವಿಯಾಗಿ ಪೂರ್ಣಗೊಂಡಿತು. ಇದು ಭಾರತದ ಸಂಪನ್ಮೂಲ ಮತ್ತು ನಾವೀನ್ಯತೆಯ ಉದಾಹರಣೆಯಾಗಿದೆ.

ವಿದೇಶಿ ಉಪಗ್ರಹಗಳ ಉಡಾವಣೆ: 2015ರಿಂದ 2024ರವರೆಗೆ ಇಸ್ರೋ ಒಟ್ಟು 398 ವಿದೇಶಿ ಉಪಗ್ರಹಗಳನ್ನು ಉಡಾಯಿಸಿದೆ. 2014ರ ಮೊದಲು ಕೇವಲ 35 ಉಪಗ್ರಹಗಳನ್ನು ಮಾತ್ರ ಉಡಾಯಿಸಲಾಗಿತ್ತು.

ಜಗತ್ತಿನ ದಾಖಲೆ: 2017 ಫೆಬ್ರವರಿ 15ರಂದು ಇಸ್ರೋ ಒಂದೇ ಮಿಷನ್ನಲ್ಲಿ 104 ಉಪಗ್ರಹಗಳನ್ನು ಉಡಾಯಿಸಿ ವಿಶ್ವದಾಖಲೆ ಸೃಷ್ಟಿಸಿತು. ಈ ದಾಖಲೆಯನ್ನು ಇಂದಿಗೂ ಯಾರೂ ಮುರಿದಿಲ್ಲ.

ಆದಿತ್ಯ L-1 ಮಿಷನ್: 2023ರಲ್ಲಿ ಉಡಾಯಿಸಲಾದ ಆದಿತ್ಯ L-1 ಭಾರತದ ಮೊದಲ ಸೌರ ಮಿಷನ್. ಫೆಬ್ರವರಿ 2025ರಲ್ಲಿ ಇದರ SUIT ಟೆಲಿಸ್ಕೋಪ್ ಸೂರ್ಯನ ಅಗ್ನಿಗೋಳದ ಅಭೂತಪೂರ್ವ ಚಿತ್ರವನ್ನು ಸೆರೆಹಿಡಿದಿತು.

ಮೋದಿ ಹೇಳಿದಂತೆ: “ಭಾರತದ ರಾಕೆಟ್ ಗಳು ಪೇಲೋಡ್ ಮಾತ್ರವಲ್ಲ, 1.4 ಶತಕೋಟಿ ಭಾರತೀಯರ ಕನಸುಗಳನ್ನು ಹೊತ್ತು ಹಾರುತ್ತಿವೆ. ನಮ್ಮ ಗುರಿ ಸ್ಪರ್ಧೆ ಅಲ್ಲ, ಮಾನವೀಯತೆಗೆ ಉಪಕಾರವಾಗುವಷ್ಟು ಎತ್ತರಕ್ಕೆ ತಲುಪುವುದು.”

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page