Home News National Sports Day–ಆಗಸ್ಟ್ 29

National Sports Day–ಆಗಸ್ಟ್ 29

13
National Sports Day

ಪ್ರತಿ ವರ್ಷ ಆಗಸ್ಟ್ 29ರಂದು ರಾಷ್ಟ್ರೀಯ ಕ್ರೀಡಾ ದಿನವನ್ನು (National Sports Day) ದೇಶಾದ್ಯಂತ ಸಡಗರದಿಂದ ಆಚರಿಸಲಾಗುತ್ತದೆ. ಈ ದಿನವನ್ನು ಹಾಕಿ ಮಾಂತ್ರಿಕ ಮೇಜರ್ ಧ್ಯಾನ್‌ಚಂದ್ ಅವರ ಜನ್ಮದಿನದ ಸ್ಮರಣಾರ್ಥವಾಗಿ ಆಚರಿಸುತ್ತಾರೆ.

ಮೇಜರ್ ಧ್ಯಾನ್ಚಂದ್ – ಹಾಕಿ ಮಾಂತ್ರಿಕ

  • ಧ್ಯಾನ್‌ಚಂದ್ 1905ರ ಆಗಸ್ಟ್ 29ರಂದು ಪ್ರಯಾಗ್ರಾಜ್‌ನಲ್ಲಿ ಜನಿಸಿದರು.
  • ಅವರು ಭಾರತ ಪರವಾಗಿ 185 ಅಂತಾರಾಷ್ಟ್ರೀಯ ಹಾಕಿ ಪಂದ್ಯಗಳಲ್ಲಿ 570 ಗೋಲು ಗಳಿಸಿದ್ದಾರೆ.
  • 1928ರಿಂದ 1936ರ ವರೆಗೆ ನಡೆದ ಮೂರು ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಸತತ ಚಿನ್ನದ ಪದಕ ತಂದಿದ್ದಾರೆ.
  • ಅವರ ಆಟದಿಂದಲೇ ಭಾರತ ಹಾಕಿಯಲ್ಲಿ ಜಾಗತಿಕ ಮಟ್ಟದಲ್ಲಿ ಹೆಸರು ಗಳಿಸಿತು.

ರಾಷ್ಟ್ರೀಯ ಕ್ರೀಡಾ ದಿನ ಯಾವಾಗ ಆರಂಭವಾಯಿತು?

  • 2012ರಲ್ಲಿ, ಧ್ಯಾನ್‌ಚಂದ್ ಜಯಂತಿಯನ್ನು ರಾಷ್ಟ್ರೀಯ ಕ್ರೀಡಾ ದಿನವಾಗಿ ಘೋಷಿಸಲಾಯಿತು.
  • ಆಗಿನಿಂದ ಪ್ರತಿವರ್ಷ ಆಗಸ್ಟ್ 29ರಂದು ಈ ದಿನವನ್ನು ಆಚರಿಸಲಾಗುತ್ತಿದೆ.
  • 2019ರಲ್ಲಿ, ಇದೇ ದಿನದಂದು “ಫಿಟ್ ಇಂಡಿಯಾ ಅಭಿಯಾನ”ವನ್ನು ಪ್ರಾರಂಭಿಸಲಾಯಿತು.

ಇತ್ತೀಚಿನ ವರ್ಷಗಳಲ್ಲಿ ಭಾರತದ ಕ್ರಿಕೆಟ್ನಿಂದ ಹಿಡಿದು ಹಾಕಿ, ಟೆನಿಸ್, ಬ್ಯಾಡ್ಮಿಂಟನ್, ಕುಸ್ತಿ, ಕಬಡ್ಡಿ, ಅಥ್ಲೆಟಿಕ್ಸ್ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಕ್ರೀಡಾಪಟುಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುತ್ತಿದ್ದಾರೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

You cannot copy content of this page