Kathmandu: ಇಂದು ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಬಲೂನ್ ಸ್ಫೋಟದಿಂದ (Balloon Explosion) ನೇಪಾಳದ ಉಪ ಪ್ರಧಾನಿಯವರು (Nepal’s Deputy Prime Minister) ಹಾಗೂ ಪೋಖರ ಮೆಟ್ರೋಪಾಲಿಟನ್ ಮೇಯರ್‌ಗೆ ಸುಟ್ಟ ಗಾಯಗಳಾಗಿವೆ. ಪೋಖರ ಪ್ರವಾಸೋದ್ಯಮ ವರ್ಷದ ಉದ್ಘಾಟನೆಯಲ್ಲಿ, ಹೈಡ್ರೋಜನ್ ತುಂಬಿದ ಬಲೂನ್ ಪಟಾಕಿಯ ಬೆಂಕಿಗೆ ಸ್ಫೋಟಗೊಂಡಿತು.
ಉಪಪ್ರಧಾನಿ ಬಿಷ್ಣು ಪ್ರಸಾದ್ ಪೌಡೆಲ್ ಹಾಗೂ ಮೇಯರ್ ಧನರಾಜ್ ಆಚಾರ್ಯ ಅವರು ಎರಡೂ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಹೆಲಿಕಾಪ್ಟರ್ ಮೂಲಕ ಕಠ್ಮಂಡುವಿಗೆ ಸಾಗಿಸಿ ಕೀರ್ತಿಪುರದ ಬರ್ನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೊಲೀಸರ ಪ್ರಕಾರ, ಪೌಡೆಲ್ ಅವರ ಕೈ ಮತ್ತು ಮುಖದಲ್ಲಿ ಸುಟ್ಟಗಾಯಗಳು ಉಂಟಾಗಿದ್ದು, ಆಚಾರ್ಯ ಅವರಿಗೆ ಗಂಭೀರ ಗಾಯಗಳಾಗಿವೆ. ಆದರೆ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.