ವಾಷಿಂಗ್ಟನ್: ಚೀನಾ ಮತ್ತು ಅಮೆರಿಕ (China-America) ದೇಶಗಳ ನಡುವೆ ಮಹತ್ವದ ಒಪ್ಪಂದ ಒಂದೇ ಇಂದು ಘೋಷಣೆಯಾಗಿದೆ. ಈ ಒಪ್ಪಂದದಡಿ ಚೀನಾ, ಅಮೆರಿಕಕ್ಕೆ ಅಪರೂಪದ ಭೂಮಿಯ ಖನಿಜಗಳನ್ನು ಪೂರೈಸಲು ಒಪ್ಪಿಗೆ ನೀಡಿದ್ದು, ಇದರಲ್ಲಿ ಚೀನಾದ ವಿದ್ಯಾರ್ಥಿಗಳು ಅಮೆರಿಕದ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮಾಡಲು ಅವಕಾಶ ಪಡೆಯಲಿದ್ದಾರೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಮಾಹಿತಿ ನೀಡಿದ್ದು, “ಈ ಒಪ್ಪಂದವು ನನಗೂ ಚೀನಾ ಅಧ್ಯಕ್ಷ ಕ್ಸಿಗೂ ಅಂತಿಮವಾಗಿ ಅನುಮೋದನೆಗೊಂಡಿದೆ. ಚೀನಾ ಅಮೆರಿಕಕ್ಕೆ ಪೂರ್ಣ ಆಯಸ್ಕಾಂತಗಳು ಸೇರಿದಂತೆ ಎಲ್ಲಾ ಅಗತ್ಯ ಅಪರೂಪದ ಖನಿಜಗಳನ್ನು ಪೂರೈಸುತ್ತದೆ. ಅದಕ್ಕೆ ಬದಲಾಗಿ, ನಾವು ಚೀನಾದ ವಿದ್ಯಾರ್ಥಿಗಳಿಗೆ ನಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ಓದುವ ಅವಕಾಶ ನೀಡಿದ್ದೇವೆ,” ಎಂದು ಅವರು ಟ್ರೂತ್ ಸೋಷಿಯಲ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಅವರು ಇನ್ನೂ ಮುಂದುವರಿಸಿ, “ಈ ಒಪ್ಪಂದದಿಂದ ಅಮೆರಿಕಕ್ಕೆ 55% ಸುಂಕದ ಲಾಭವಾಗುತ್ತಿದೆ. ಚೀನಾಕೆ 10% ಲಾಭ ಸಿಗುತ್ತದೆ. ಈ ಸಂಬಂಧವು ಅತ್ಯುತ್ತಮವಾಗಿದೆ” ಎಂದಿದ್ದಾರೆ.