Search
WhatsApp alerts

Home › Business

Bengaluru ಫೀನಿಕ್ಸ್ ಮಾಲ್‌ನಲ್ಲಿ ಶೀಘ್ರದಲ್ಲೇ Apple Store ಆರಂಭ

administrator · Published

Apple Store Opening Soon at Phoenix Mall, Bengaluru

ಆಪಲ್ ಭಾರತದಲ್ಲಿ ತನ್ನ ಮೂರನೇ ರಿಟೇಲ್ ಅಂಗಡಿಯನ್ನು (Apple Store) ತೆರೆಸಲು ಸಿದ್ಧತೆ ನಡೆಸುತ್ತಿದೆ ಎಂಬ ಮಾಹಿತಿ ಬಂದಿದೆ. ಬೆಂಗಳೂರು ಹೆಬ್ಬಾಳದಲ್ಲಿರುವ ಫೀನಿಕ್ಸ್ ಮಾಲ್ ಆಫ್ ಏಷ್ಯಾದಲ್ಲಿ ಈ ಅಂಗಡಿಯನ್ನು ತೆರೆಯಲಾಗುತ್ತಿದೆ. ಕಂಪನಿಯು ಈಗಾಗಲೇ ಮುಂಬೈನ ಬಾಂದ್ರಾ ಕುರ್ಳಾ ಕಾಂಪ್ಲೆಕ್ಸ್ (ಬಿಕೆಸಿ) ಮತ್ತು ದೆಹಲಿಯ ಸಾಕೇತ್‌ನಲ್ಲಿ ಅಂಗಡಿಗಳನ್ನು ಆರಂಭಿಸಿದೆ.

ಹೊಸ ಅಂಗಡಿಗೆ ಸಂಬಂಧಿಸಿದ ಗುತ್ತಿಗೆ ಒಪ್ಪಂದವು ಈಗಾಗಲೇ ಸಹಿ ಆಗಿದ್ದು, ಇದು ವರ್ಷಕ್ಕೆ 2.09 ಕೋಟಿ ರೂ.ಗಳ ಬಾಡಿಗೆ ಹೊಂದಿದೆ. ಇದು ತಿಂಗಳಿಗೆ ಸುಮಾರು 17.4 ಲಕ್ಷ ರೂ.ಗಳಷ್ಟು ಆಗುತ್ತದೆ. ಆಪಲ್ ಕಂಪನಿಯು ಆರಂಭಿಕವಾಗಿ ಶೇ.2ರಷ್ಟು ಆದಾಯದ ಪಾಲನ್ನು, ನಂತರ ಶೇ.2.5 ರಷ್ಟು ಪಾವತಿಸಬೇಕಾಗಿರುತ್ತದೆ. ಬಾಡಿಗೆ ದರವು ಪ್ರತಿ ಮೂರು ವರ್ಷಕ್ಕೊಮ್ಮೆ ಶೇ.15 ರಷ್ಟು ಹೆಚ್ಚಾಗಲಿದೆ.

ಬೆಂಗಳೂರು ಅಂಗಡಿ ಗಾತ್ರವು ದೆಹಲಿಯ ಆಪಲ್ ಅಂಗಡಿಗೆ ಸಮನಾಗಿದ್ದರೂ, ಮುಂಬೈನ ಜಿಯೋ ವರ್ಲ್ಡ್ ಡ್ರೈವ್ ಅಂಗಡಿಗಿಂತ ಚಿಕ್ಕದಾಗಿರಲಿದೆ. ಈ ಅಂಗಡಿಗೆ ಆಪಲ್ ಸಂಸ್ಥೆಯು 1.046 ಕೋಟಿ ರೂಪಾಯಿಗಳ ಠೇವಣಿ ಪಾವತಿಸಿದೆ.

ಆಪಲ್ ಸಿಇಒ ಟಿಮ್ ಕುಕ್ ಅವರು ಹಿಂದೆ ಭಾರತದಲ್ಲಿ ಇನ್ನಷ್ಟು ಅಂಗಡಿಗಳನ್ನು ತೆರೆಯಲಿರುವ ಬಗ್ಗೆ ಹೇಳಿದ್ದರು. ಪುನೆಯಂತ ಹಲವಾರು ನಗರಗಳಲ್ಲಿ ಹೊಸ ಅಂಗಡಿಗಳ ಯೋಜನೆಯಿದ್ದು, ದೆಹಲಿ NCR ಮತ್ತು ಮುಂಬೈದಲ್ಲೂ ಹೊಸ ಸ್ಥಳಗಳನ್ನು ಹುಡುಕಲಾಗುತ್ತಿದೆ.

ಫೀನಿಕ್ಸ್ ಮಾಲ್ ಆಫ್ ಏಷ್ಯಾದ ಮಾಲ್ ನಿರ್ವಾಹಕರು, ಆಪಲ್ ಕಂಪನಿಗೆ ವಿಶೇಷ ಸ್ಥಳವನ್ನು ಕೊಟ್ಟಿರುವುದಾಗಿ ಮತ್ತು ಆ ಅಂಗಡಿಗೆ ಸ್ಪರ್ಧೆಯಾದ ಬ್ರ್ಯಾಂಡ್‌ಗಳಿಗೆ ಅದೇ ವಲಯದಲ್ಲಿ ಜಾಗ ನೀಡಲಾಗುವುದಿಲ್ಲ ಎಂದು ಭರವಸೆ ನೀಡಿದ್ದಾರೆ.

For Daily Updates WhatsApp ‘HI’ to 7406303366

Read next

ಹೃದಯದ ಆರೋಗ್ಯ ಕಾಪಾಡಿ: ವಿಶ್ವ ಹೃದಯ ದಿನದಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಚೇತನ್ ಕಿವಿಮಾತು

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಆಗ್ನೇಯ ಪದವೀಧರ ಕ್ಷೇತ್ರ ಚುನಾವಣೆಗೆ ಸಹಾಯವಾಣಿ ಕೇಂದ್ರ ಸ್ಥಾಪನೆ

ಹಿರಿಯ ನಾಗರಿಕರ ಕುಂದುಕೊರತೆ ಪರಿಹಾರಕ್ಕೆ ಅಧಿಕಾರಿಗಳಿಗೆ ಡಿಸಿ ಕಟ್ಟುನಿಟ್ಟಿನ ಸೂಚನೆ

ಕೆಎಸ್‌ಆರ್‌ಟಿಸಿಯಲ್ಲಿ ಅಪ್ರೆಂಟೀಸ್ ತರಬೇತಿಗೆ ಅರ್ಜಿ ಆಹ್ವಾನ

You cannot copy content of this page