back to top
25.8 C
Bengaluru
Saturday, August 30, 2025
HomeIndiaದೇಹಲಿಯಲ್ಲಿ New Fuel Policy ಜಾರಿ ಹಳೆಯ ವಾಹನಗಳಿಗೆ Petrol, Diesel ಇಲ್ಲ

ದೇಹಲಿಯಲ್ಲಿ New Fuel Policy ಜಾರಿ ಹಳೆಯ ವಾಹನಗಳಿಗೆ Petrol, Diesel ಇಲ್ಲ

- Advertisement -
- Advertisement -

ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ನೇತೃತ್ವದ ಸರ್ಕಾರ ನಗರದಲ್ಲಿನ ವಾಯುಮಾಲಿನ್ಯ ತಗ್ಗಿಸಲು ಗಂಭೀರ ಕ್ರಮ ಕೈಗೊಂಡಿದೆ. ಇದೀಗ ಪೆಟ್ರೋಲ್ ಬಂಕ್ಗಳಲ್ಲಿ ವಾಹನ ಪರಿಶೀಲನೆ ನಂತರ (New fuel policy) ಮಾತ್ರ ಇಂಧನ ಲಭ್ಯವಾಗಲಿದೆ.

ಯಾವ ವಾಹನಗಳಿಗೆ ಇಂಧನ ಸಿಗಲ್ಲ?

  • ಬಂಕ್ ಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ.
  • ಇವು ವಾಹನಗಳನ್ನು ಸ್ಕ್ಯಾನ್ ಮಾಡಿ ಅವು ಎಷ್ಟು ಹಳೆಯದು ಎಂಬ ಮಾಹಿತಿಯನ್ನು ನೀಡುತ್ತವೆ.
  • ಹೊಸ ನಿಯಮದಂತೆ,
  • 10 ವರ್ಷ ಹಳೆಯ ಡೀಸೆಲ್ ವಾಹನಗಳಿಗೆ
  • 15 ವರ್ಷ ಹಳೆಯ ಪೆಟ್ರೋಲ್ ವಾಹನಗಳಿಗೆ

ಇಂಧನ ತುಂಬಲು ಅವಕಾಶವಿಲ್ಲ. ಹಳೆಯ ವಾಹನಗಳು ಪರಿಸರಕ್ಕೆ ಹಾನಿಕಾರಕವಾಗಿರುವುದರಿಂದ ಇವುಗಳಿಗೆ ಪೆಟ್ರೋಲ್ ಅಥವಾ ಡೀಸೆಲ್ ನೀಡದಂತೆ ತೀರ್ಮಾನಿಸಲಾಗಿದೆ.

ನಿಯಮ ಜಾರಿಗೆ ಆಗುವ ಸಮಯ

  • ಈ ನಿಯಮವನ್ನು ಸರ್ಕಾರ ಮೊದಲಿಗೆ ಏಪ್ರಿಲ್ 1ರಿಂದ ಜಾರಿಗೆ ತರಲು ಯತ್ನಿಸಿತ್ತು.
  • ಆದರೆ ಎಲ್ಲಾ ಬಂಕ್ಗಳಲ್ಲಿ ತಂತ್ರಜ್ಞಾನ ಅಳವಡಿಸಲು ಸಾಧ್ಯವಾಗದ ಕಾರಣ, ಈಗ 2025ರ ಏಪ್ರಿಲ್ ಅಂತ್ಯದೊಳಗೆ ಈ ನಿಯಮ ಜಾರಿಗೊಳ್ಳಲಿದೆ.
  • ಈಗಾಗಲೇ ದೆಹಲಿಯ 372 ಪೆಟ್ರೋಲ್ ಬಂಕ್ ಗಳು ಮತ್ತು 105 CNG ಕೇಂದ್ರಗಳಲ್ಲಿ ಸ್ಕ್ಯಾನಿಂಗ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

ಮುಂದಿನ ಹಂತಗಳು ಯಾವುವು?

  • ಇಂದಿಗೂ ಉಳಿದಿರುವ 23 ಇಂಧನ ಕೇಂದ್ರಗಳಲ್ಲಿ ಕ್ಯಾಮೆರಾ ಅಳವಡಿಸುವ ಕೆಲಸ ಮುಂದುವರಿದಿದೆ.
  • ಮುಂದಿನ 10-15 ದಿನಗಳೊಳಗೆ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.
  • ಈ ಕಾರ್ಯವೈಖರಿಯನ್ನು ಮುಖ್ಯಮಂತ್ರಿ ರೇಖಾ ಗುಪ್ತಾ ಮತ್ತು ಪರಿಸರ ಸಚಿವ ಮಂಜಿಂದರ್ ಸಿಂಗ್ ಸಿರ್ಸಾ ಅವರು ನೇರವಾಗಿ ನೋಡಿಕೊಳ್ಳುತ್ತಿದ್ದಾರೆ.

ಇದು ದೆಹಲಿಯ ಪರಿಸರ ಸಂರಕ್ಷಣೆಗೆ ಕ್ರಮವೊಂದಾಗಿ ನಿರೀಕ್ಷಿಸಲಾಗುತ್ತಿದ್ದು, ಇತರ ರಾಜ್ಯಗಳು ಕೂಡ ಇದೇ ಮಾದರಿಯಲ್ಲಿ ಕ್ರಮ ಕೈಗೊಳ್ಳಬಹುದಾದ ಸಾಧ್ಯತೆ ಇದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page