back to top
22.9 C
Bengaluru
Saturday, August 30, 2025
HomeMoviesKannadaKannada ಸಿನಿಮಾಗಳಿಗೆ ಹೊಸ OTT Platform

Kannada ಸಿನಿಮಾಗಳಿಗೆ ಹೊಸ OTT Platform

- Advertisement -
- Advertisement -

ಕನ್ನಡ ಸಿನಿಮಾಗಳನ್ನು (Kannada movies) OTTಗಳು ಖರೀದಿ ಮಾಡುತ್ತಿಲ್ಲ ಎಂಬ ದೂರು ಕಳೆದ ಕೆಲ ವರ್ಷಗಳಿಂದಲೂ ಕೇಳಿ ಬರುತ್ತಲೇ ಇದೆ. ಕನ್ನಡ ಸಿನಿಮಾಗಳನ್ನು OTTಗಳು ತಾತ್ಸಾರದಿಂದ ನೋಡುತ್ತವೆ.

ಒಟಿಟಿಗಳಿಗೆ ಹೆಚ್ಚು ಸಬ್​ಸ್ಕ್ರೈಬರ್​ಗಳು (subscribers) ಇರುವುದು ಕರ್ನಾಟಕದಲ್ಲಿಯೇ (Karnataka) ಆದರೆ ಅವರು ಕನ್ನಡ ಸಿನಿಮಾಗಳನ್ನು ಮಾತ್ರ ಖರೀದಿ ಮಾಡಿ ಪ್ರದರ್ಶನ ಮಾಡುವುದಿಲ್ಲ ಎಂಬ ದೂರು ಇದೆ.

ಕನ್ನಡಿಗರಿಗೆ ಕನ್ನಡದ್ದೇ ಆದ ಒಟಿಟಿ ನಿರ್ಮಾಣ ಆಗಬೇಕು ಎಂಬ ಬೇಡಿಕೆ ಹಲವು ವರ್ಷಗಳಿಂದಲೂ ಇದೆ. ಕೆಲವು ಪ್ರಯತ್ನಗಳು ಈ ನಿಟ್ಟಿನಲ್ಲಿ ಆಗಿವೆಯಾದರೂ ದೊಡ್ಡ ಯಶಸ್ಸು ದೊರೆತಿಲ್ಲ. ಇದೀಗ ಕನ್ನಡದ್ದೇ ಆದ ಹೊಸ ಒಟಿಟಿ ವೇದಿಕೆಯೊಂದು ಬಿಡುಗಡೆ ಆಗಿದೆ.

‘ಒಟಿಟಿ ಪ್ಲೇಯರ್’ ಹೆಸರಿನ ಹೊಸ ಒಟಿಟಿ ಬಿಡುಗಡೆ ಮಾಡಲಾಗಿದೆ. ಆದರೆ ಇದು ಆಪ್​ ಮಾದರಿಯ ಒಟಿಟಿ ಅಲ್ಲ, ಬದಲಿಗೆ ವೆಬ್​ಸೈಟ್ ಆಗಿದೆ. ಅತ್ಯಂತ ಕಡಿಮೆ ಮೊತ್ತದಲ್ಲಿ ವೆಬ್​ಸೈಟ್​ಗೆ ಹೋಗಿ ಸಿನಿಮಾ ವೀಕ್ಷಣೆ ಮಾಡಬಹುದಾಗಿದೆ.

ಹಾರ್ಲೀ ಎಂಟರ್ ಟೈನ್ ಮೆಂಟ್ ಮೀಡಿಯಾ ಸಂಸ್ಥೆ ಅಡಿಯಲ್ಲಿ ಗೀತಾ ಕೃಷ್ಣನ್ ರಾವ್ ಹಾಗೂ ಮುರಳಿರಾವ್ ಅವರು ಈ ವೆಬ್ ಸೈಟ್ ಅಭಿವೃದ್ಧಿಪಡಿಸಿದ್ದಾರೆ. ಇದರ ಮೂಲಕ ಯಾವುದೇ ಅಡೆತಡೆಗಳಿಲ್ಲದೆ, ಜಾಹೀರಾತು ಮುಕ್ತವಾಗಿ ತಮ್ಮ ನೆಚ್ಚಿನ ಚಲನಚಿತ್ರಗಳನ್ನು ವೀಕ್ಷಿಸಬಹುದಾಗಿದೆ.

ನಮ್ಮ ವೆಬ್ ಸೈಟ್ ಗೆ ಲಾಗಿನ್​ ಆಗಿ ಅಲ್ಪದರ ಪಾವತಿಸಿ ಹೊಸ ಚಿತ್ರಗಳನ್ನು ನೋಡಬಹುದು. ಇದನ್ನು ಆನ್ ಲೈನ್ ಥೇಟರ್ ಅನ್ನಬಹುದು‌. ಬಂದ ಹಣದಲ್ಲಿ ನಿರ್ಮಾಪಕರಿಗೆ 70% ಶೇರ್ ಕೊಡುತ್ತೇವೆ. ಅಲ್ಲದೆ ಉತ್ತಮ ಕಿರು ಚಿತ್ರಗಳನ್ನು ಕೂಡ ನಮ್ಮ ವೆಬ್ ಸೈಟ್ ಬಿಡುಗಡೆ ಮಾಡುತ್ತೇವೆ’ ಎಂದು ವಿವರಿಸಿದರು.

ಒಟಿಟಿ ಪ್ಲೇಯರ್​ನಲ್ಲಿ ಕೆಲ ಕನ್ನಡ ಸಿನಿಮಾಗಳು, ಕನ್ನಡ ಕಿರುಚಿತ್ರಗಳನ್ನು ಪ್ರದರ್ಶಿಸಲಾಗಿದೆ. ಕೆಲವು ಇಂಗ್ಲೀಷ್ ಸಿನಿಮಾಗಳನ್ನೂ ಸಹ ಪ್ರದರ್ಶಿಸಲಾಗುತ್ತಿದೆ. ಹಲವು ಸಿನಿಮಾಗಳ ಶೀಘ್ರವೇ ಬರಲಿವೆ ಎಂದು ಜಾಹೀರಾತು ಹಾಕಲಾಗಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page