back to top
21.4 C
Bengaluru
Sunday, January 25, 2026
HomeKarnatakaನಿಗಮ, ಮಂಡಳಿ, ಪ್ರಾಧಿಕಾರಗಳಿಗೆ ಹೊಸ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ನೇಮಕ

ನಿಗಮ, ಮಂಡಳಿ, ಪ್ರಾಧಿಕಾರಗಳಿಗೆ ಹೊಸ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ನೇಮಕ

- Advertisement -
- Advertisement -

Bengaluru: ರಾಜ್ಯದ ವಿವಿಧ ನಿಗಮಗಳು, ಮಂಡಳಿ ಹಾಗೂ ಪ್ರಾಧಿಕಾರಗಳಿಗೆ 34 ಮಂದಿ ಅಧ್ಯಕ್ಷರು ಮತ್ತು 10 ಮಂದಿ ಉಪಾಧ್ಯಕ್ಷರ ನೇಮಕ ಮಾಡಲಾಗಿದೆ. ಈ ನೇಮಕವು ಎರಡು ವರ್ಷದ ಅವಧಿಗೆ ಅನ್ವಯಿಸುತ್ತದೆ.

ಎಐಸಿಸಿ 39 ಮಂದಿಯ ಪಟ್ಟಿಯನ್ನು ಕಳುಹಿಸಿತ್ತು. ಅದರಲ್ಲಿ ಸ್ವಲ್ಪ ಬದಲಾವಣೆ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 34 ಮಂದಿಯ ಅಂತಿಮ ಪಟ್ಟಿಗೆ ಅಂಕಿತ ಹಾಕಿದ್ದಾರೆ. ಈ ಪಟ್ಟಿಯನ್ನು ಮುಖ್ಯ ಕಾರ್ಯದರ್ಶಿ ಕಚೇರಿಯಿಂದ ಸಂಬಂಧಿತ ಇಲಾಖೆಗೆ ರವಾನಿಸಲಾಗಿದೆ.

ಮೊದಲಿನ ಪಟ್ಟಿಯಲ್ಲಿ ಹೆಚ್.ಡಿ. ಗಣೇಶ್ ಹಾಗೂ ನಿಕೇತ್ ರಾಜ್ ಹೆಸರು ಇರಲಿಲ್ಲ. ಆದರೆ ಸಿಎಂ ಅಂಕಿತ ಹಾಕಿದ ಹೊಸ ಪಟ್ಟಿಯಲ್ಲಿ ಗಣೇಶ್ ಅವರನ್ನು ಮೈಸೂರು ಪೇಯಿಂಟ್ಸ್ ಮತ್ತು ವಾರ್ನಿಷ್ ಲಿ. ಅಧ್ಯಕ್ಷರಾಗಿ ಹಾಗೂ ನಿಕೇತ್ ರಾಜ್ ಅವರನ್ನು ಬಿಎಂಟಿಸಿ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ.

ಇನ್ನು ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗಕ್ಕೆ ಪಿ. ರಘು, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ಶಿವಲೀಲಾ ವಿನಯ್ ಕುಲಕರ್ಣಿ, ಜೀವವೈವಿಧ್ಯ ಮಂಡಳಿಗೆ ವಡ್ನಾಳ್ ಜಗದೀಶ್, ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮಕ್ಕೆ ಮುರಳಿ ಅಶೋಕ್ ಸಾಲಪ್ಪ, ಅನುಸೂಚಿತ ಜಾತಿ-ಪಂಗಡಗಳ ಆಯೋಗಕ್ಕೆ ಡಾ. ಮೂರ್ತಿ, ಮಾಜಿ ಸೈನಿಕರ ಕಲ್ಯಾಣ ಮಂಡಳಿಗೆ ಕರ್ನಲ್ ಮಲ್ಲಿಕಾರ್ಜುನ್, ಮಾವು ಅಭಿವೃದ್ಧಿ ನಿಗಮಕ್ಕೆ ಡಾ. ಬಿ.ಸಿ. ಮುದ್ದು ಗಂಗಾಧರ್ ಸೇರಿದಂತೆ ಹಲವರನ್ನು ನೇಮಿಸಲಾಗಿದೆ.

ಅದೇ ರೀತಿ, ಪರಿಸರ ಪ್ರವಾಸೋದ್ಯಮ ಮಂಡಳಿಗೆ ಶಾಲೆಟ್ ಲವೀನಾ ಪಿಂಟೊ, ಮರಾಠ ಸಮುದಾಯ ಅಭಿವೃದ್ಧಿ ನಿಗಮಕ್ಕೆ ಜಿ.ಹೆಚ್. ಮರಿಯೋಜಿ ರಾವ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಎಂ.ಎ. ಗಫೂರ್, ಮಂಗಳೂರು ವಿದ್ಯುತ್ ಸರಬರಾಜು ಕಂಪೆನಿಗೆ ಕೆ. ಹರೀಶ್ ಕುಮಾರ್, ಉಗ್ರಾಣ ನಿಗಮಕ್ಕೆ ಎನ್. ಸಂಪಂಗಿ, ಟ್ರಕ್ ಟರ್ಮಿನಲ್ಸ್ ಲಿಮಿಟೆಡ್‌ಗೆ ವೈ. ಸಯೀದ್ ಅಹಮದ್, ಕಾಡುಗೊಲ್ಲ ಅಭಿವೃದ್ಧಿ ನಿಗಮಕ್ಕೆ ಮಹೇಶ್ ಎಂ., ಬಯಲುಸೀಮೆ ಅಭಿವೃದ್ಧಿ ನಿಗಮಕ್ಕೆ ಹೆಚ್.ಬಿ. ಮಂಜಪ್ಪ, ಉಪ್ಪಾರ ಅಭಿವೃದ್ಧಿ ನಿಗಮಕ್ಕೆ ಭರಮಣ್ಣ ಉಪ್ಪಾರರನ್ನು ಆಯ್ಕೆ ಮಾಡಿದ್ದಾರೆ.

ಇದೇ ರೀತಿಯಾಗಿ ಹಲವು ನಿಗಮಗಳು, ಮಂಡಳಿ ಹಾಗೂ ಪ್ರಾಧಿಕಾರಗಳಿಗೆ ಅಧ್ಯಕ್ಷರು ನೇಮಕಗೊಂಡಿದ್ದಾರೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page