Bengaluru: ಬೆಂಗಳೂರಿನ ಜವಾಹರಲಾಲ್ ನೆಹರೂ ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್ (JNCASR) ವಿಜ್ಞಾನಿಗಳು ಸುಪರ್ ಫಾಸ್ಟ್ ಆಗಿ ಚಾರ್ಜ್ ಆಗುವ ಮತ್ತು ಹೆಚ್ಚು ಕಾಲ ಬಾಳುವ ಸೋಡಿಯಂ ಅಯಾನ್ ಬ್ಯಾಟರಿಯನ್ನು (sodium battery) ಅಭಿವೃದ್ಧಿಪಡಿಸಿದ್ದಾರೆ. ಪ್ರೊಫೆಸರ್ ಪ್ರೇಮಕುಮಾರ್ ಸೆಂಗುಟ್ಟುವನ್ ನೇತೃತ್ವದ ತಂಡ ಈ ಬ್ಯಾಟರಿಯನ್ನು ತಯಾರಿಸಿದ್ದು, ಇದು ಲಿಥಿಯಮ್ ಬ್ಯಾಟರಿಗಿಂತ 80% ಹೆಚ್ಚು ವೇಗದಲ್ಲಿ ಕೇವಲ ಆರು ನಿಮಿಷದಲ್ಲಿ ಚಾರ್ಜ್ ಆಗುತ್ತದೆ.
ಈ ಬ್ಯಾಟರಿ 3,000 ಬಾರಿ ಚಾರ್ಜ್ ಮತ್ತು ಡಿಸ್ಚಾರ್ಜ್ ಸೈಕಲ್ ಮಾಡಬಹುದು, ಅಂದರೆ ಇದು ಲಿಥಿಯಂ ಬ್ಯಾಟರಿಗಿಂತ 8-10 ವರ್ಷ ಹೆಚ್ಚು ಕಾಲ ಕಾರ್ಯನಿರ್ವಹಿಸುತ್ತದೆ. ಜೊತೆಗೆ, ಇದು ಲಿಥಿಯಮ್ನ ಗ್ಲೋಬಲ್ ಅವಲಂಬನೆಯನ್ನ ಕಡಿಮೆ ಮಾಡಿ, ಭಾರತದಲ್ಲಿ ಲಭ್ಯವಿರುವ ಸೋಡಿಯಂ ಬಳಕೆಮಾಡುವ ಮೂಲಕ ದೇಶದ ಸ್ವಾವಲಂಬ್ಯತೆ ಹೆಚ್ಚಿಸುವಲ್ಲಿ ಸಹಾಯಕವಾಗಿದೆ.
ಇದು ವಿಶೇಷವಾಗಿ ಎಲೆಕ್ಟ್ರಿಕ್ ವಾಹನಗಳು ಮತ್ತು ಸೌರಶಕ್ತಿ ಸಂಗ್ರಹಣೆಯಲ್ಲಿ ಮಹತ್ವಪೂರ್ಣವಾಗಲಿದೆ. ಭಾರತದಲ್ಲಿ ಸೋಡಿಯಂ ಬ್ಯಾಟರಿ ಉತ್ಪಾದನೆಯ ಮೂಲಕ ಗ್ರೀನ್ ಎನರ್ಜಿ ಮಿಷನ್ ಅನ್ನು ವೇಗವಾಗಿ ಮುಗಿಸುವ ದಾರಿಯಾಗಿದೆ.