ಬೆಂಗಳೂರು: ಕರ್ನಾಟಕ ಬಿಜೆಪಿ ಒಳಜಗಳ ಹೊಸ ತಿರುವು ಪಡೆದುಕೊಳ್ಳುತ್ತಿದೆ. ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರರನ್ನು ಕೆಳಗಿಳಿಸಲು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Vijayendra, Yatnal) ನೇತೃತ್ವದ ಗುಂಪು ಶ್ರಮಿಸುತ್ತಿದೆ. ಆದರೆ, ವಿಜಯೇಂದ್ರ ಕೂಡಾ ತಂತ್ರ ರೂಪಿಸುತ್ತಿದ್ದಾರೆ.
ಈ ನಡುವೆ ವಿಜಯೇಂದ್ರ ಮತ್ತು ಯತ್ನಾಳ್ ಇಬ್ಬರೂ ಕೇಂದ್ರ ಸಚಿವ ಸೋಮಣ್ಣ ಮನೆ ಪೂಜೆ ನೆಪದಲ್ಲಿ ದೆಹಲಿಗೆ ತೆರಳಿದ್ದಾರೆ. ಆದರೆ, “ನಾನು ಯಾರನ್ನೂ ಕರೆದಿಲ್ಲ” ಎಂಬ ಸೋಮಣ್ಣನ ಹೇಳಿಕೆಯಿಂದ ಹೊಸ ಅನುಮಾನಗಳು ಮೂಡಿವೆ.
ವಿಜಯೇಂದ್ರ ದಾವಣಗೆರೆ ಪ್ರವಾಸ ಕೈ ಬಿಡಿ, ಹೈಕಮಾಂಡ್ ಕರೆಯೊಂದಿಗೆ ದೆಹಲಿಗೆ ತೆರಳಿದ್ದಾರೆ. ಯತ್ನಾಳ್ ಕೂಡ ದೆಹಲಿಗೆ ಹೋದ ಮುನ್ನ ತಮ್ಮ ಬಣದ ನಾಯಕರೊಂದಿಗೆ ಸಭೆ ನಡೆಸಿದ್ದಾರೆ.
ಯತ್ನಾಳ್, “ನಾನು ರಾಜ್ಯಾಧ್ಯಕ್ಷರ ರೇಸ್‌ನಲ್ಲಿ ಇದ್ದೇನೆ” ಎಂದರೆ, ವಿಜಯೇಂದ್ರ ಇದಕ್ಕೆ ಪ್ರತಿಕ್ರಿಯಿಸಿ, “ಯತ್ನಾಳ್ ಹೇಳಿದ್ದರಲ್ಲಿ ತಪ್ಪಿಲ್ಲ” ಎಂದು ಟಾಂಗ್ ನೀಡಿದ್ದಾರೆ.
ಪ್ರಯಾಗ್ ರಾಜ್‌ನಲ್ಲಿ ಯತ್ನಾಳ್ ಅಭಿಮಾನಿಗಳು ಪೂಜೆ ಸಲ್ಲಿಸಿ, ಅವರ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕಾಗಿ ಪ್ರಾರ್ಥಿಸಿದ್ದಾರೆ. ದೆಹಲಿಯಲ್ಲಿ ನಡೆಯುತ್ತಿರುವ ಈ ಬೆಳವಣಿಗೆಗಳಿಂದ ರಾಜ್ಯ ಬಿಜೆಪಿಯ ಭವಿಷ್ಯ ಏನಾಗಲಿದೆ ಎಂಬುದನ್ನು ಮುಂದಿನ ದಿನಗಳು ತೀರ್ಮಾನಿಸಲಿವೆ.