Ahmedabad: ಖಾಸಗಿ ಕ್ಷೇತ್ರದ ಉಷ್ಣ ವಿದ್ಯುತ್ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಅದಾನಿ ಪವರ್ (Adani Power) ಲಿಮಿಟೆಡ್ (Adani Power Ltd) ಕಂಪನಿಯು ವಿದರ್ಭ ಇಂಡಸ್ಟ್ರೀಸ್ ಪವರ್ ಲಿಮಿಟೆಡ್ (VIPL) ಕಂಪನಿಯನ್ನು 4,000 ಕೋಟಿ ರೂಪಾಯಿಗೆ ಖರೀದಿಸಿ ತನ್ನ ಸಾಮರ್ಥ್ಯವನ್ನು ಮತ್ತಷ್ಟು ವಿಸ್ತರಿಸಿದೆ.
ವಿಐಪಿಎಲ್ ಮಹಾರಾಷ್ಟ್ರದ ಬುಟಿಬೋರಿಯಲ್ಲಿ 300 ಮೆಗಾವ್ಯಾಟ್ ಸಾಮರ್ಥ್ಯದ ಎರಡು ಕಲ್ಲಿದ್ದಲು ಆಧಾರಿತ ವಿದ್ಯುತ್ ಘಟಕಗಳನ್ನು ಹೊಂದಿದ್ದು, ಈ ಘಟಕಗಳಿಂದ ಒಟ್ಟು 600 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಸಾಧ್ಯ. ಈ ಖರೀದಿಯೊಂದಿಗೆ ಅದಾನಿ ಪವರ್ ಸಂಸ್ಥೆಯ ಒಟ್ಟು ವಿದ್ಯುತ್ ಉತ್ಪಾದನಾ ಸಾಮರ್ಥ್ಯ 18,150 ಮೆಗಾವ್ಯಾಟ್ಕ್ಕೆ ಏರಿಕೆಯಾಗಿದೆ.
ಈ ವ್ಯವಹಾರಕ್ಕೆ ಮುಂಬೈ ಎನ್‌ಸಿಎಲ್ಟಿ (NCLT) ಜೂನ್ 18, 2025ರಂದು ಅನುಮೋದನೆ ನೀಡಿದ್ದು, ಜುಲೈ 7ರಂದು ಅದಾನಿ ಪವರ್ ತನ್ನ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೆ ತಂದಿದೆ.
ಭವಿಷ್ಯದ ಯೋಜನೆಗಳು: ಅದಾನಿ ಪವರ್ ಮುಂದಿನ ಐದು ವರ್ಷಗಳಲ್ಲಿ ತನ್ನ ಉತ್ಪಾದನಾ ಸಾಮರ್ಥ್ಯವನ್ನು 30,670 ಮೆಗಾವ್ಯಾಟ್ಕ್ಕೆ ತಲುಪಿಸಲು ಯೋಜಿಸಿದೆ. ಈ ಭಾಗದಲ್ಲಿ ಆಕರ್ಷಕ ಯೋಜನೆಗಳಿವೆ.
- ಬ್ರೌನ್ಫೀಲ್ಡ್ ಘಟಕಗಳು (1,600 ಮೆ.ವ್ಯಾ ಪ್ರತಿ ಘಟಕ),
- ಸಿಂಗ್ರೋಲಿ ಮಹಾನ್ (ಮಧ್ಯಪ್ರದೇಶ)
- ರಾಯಪುರ್, ರಾಯಗಡ್, ಕೋರ್ಬಾ (ಛತ್ತೀಸ್‌ಗಢ)
- ಕವಾಯ್ (ರಾಜಸ್ಥಾನ)
- ಗ್ರೀನ್ಫೀಲ್ಡ್ ಘಟಕಗಳು
- ಮಿರ್ಜಾಪುರ (ಉತ್ತರ ಪ್ರದೇಶ) – 1,600 ಮೆ.ವ್ಯಾ
- ಕೋರ್ಬಾ – 1,600 ಮೆ.ವ್ಯಾ + 1,320 ಮೆ.ವ್ಯಾ ಪುನಃಸ್ಥಾಪನೆ ಯೋಜನೆ
ಈ ಯೋಜನೆಗಳು ಪೂರ್ಣಗೊಂಡರೆ, ಅದಾನಿ ಪವರ್ 2030ರೊಳಗೆ ದೇಶದ ಪ್ರಮುಖ ವಿದ್ಯುತ್ ಉತ್ಪಾದಕ ಕಂಪನಿಯಾಗಿ ಸದೃಢವಾಗಲಿದೆ.