back to top
20.5 C
Bengaluru
Wednesday, June 4, 2025
HomeNewsIPL ಗೆ ಸೆಡ್ಡು ಹೊಡೆಯಲು ಹೊಸ T20 ಲೀಗ್!

IPL ಗೆ ಸೆಡ್ಡು ಹೊಡೆಯಲು ಹೊಸ T20 ಲೀಗ್!

- Advertisement -
- Advertisement -

IPL ಈಗಾಗಲೇ ವಿಶ್ವದ ಪ್ರಮುಖ ಟಿ20 ಲೀಗ್ ಆಗಿದ್ದು, ಇದರ ಪ್ರತಿಷ್ಠೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆದರೆ, ಇತ್ತೀಚೆಗೆ ಬಿಗ್ ಬ್ಯಾಷ್, ಸಿಪಿಎಲ್, ಪಿಎಸ್‌ಎಲ್, ದಕ್ಷಿಣ ಆಫ್ರಿಕಾ ಟಿ20 ಲೀಗ್‌ಗಳೂ ಜನಪ್ರಿಯತೆಯನ್ನು ಪಡೆಯುತ್ತಿವೆ. ಈ ನಡುವೆಯೇ, ಸೌದಿ ಅರೇಬಿಯಾ ತನ್ನದೇ ಆದ ಟಿ20 ಲೀಗ್ ಆರಂಭಿಸಲು ಮಹಾ ಯೋಜನೆ ರೂಪಿಸುತ್ತಿದೆ.

ಸೌದಿ ಅರೇಬಿಯಾ ಕ್ರೀಡಾಕ್ಷೇತ್ರದಲ್ಲಿ ತನ್ನ ಪ್ರಭಾವ ಹೆಚ್ಚಿಸಲು ಬೃಹತ್ ಹೂಡಿಕೆ ಮಾಡುತ್ತಿದೆ. ಗಾಲ್ಫ್, ಫಾರ್ಮುಲಾ ಒನ್, ಫಿಫಾ ವಿಶ್ವಕಪ್ 2034 ಅನಂತರ, ಈಗ ಟಿ20 ಕ್ರಿಕೆಟ್ ಲೀಗ್ ಶುರುಮಾಡಲು 4300 ಕೋಟಿ ಹೂಡಿಕೆ ಮಾಡಲು ತೀರ್ಮಾನಿಸಿದೆ. ಇದಕ್ಕಾಗಿ ಆಸ್ಟ್ರೇಲಿಯಾದ ಕ್ರಿಕೆಟ್ ತಜ್ಞರು, ಆಟಗಾರರ ಸಂಘದ ಸಹಕಾರ ಪಡೆದುಕೊಂಡಿದೆ.

ಆಸ್ಟ್ರೇಲಿಯಾದ ಲೆಜೆಂಡರಿ ಆಟಗಾರ ನೀಲ್ ಮ್ಯಾಕ್ಸ್ವೆಲ್ ಈ ಯೋಜನೆಗೆ ಮುನ್ನಡೆ ನೀಡುತ್ತಿದ್ದು, ಹೊಸ ಲೀಗ್ ಐಪಿಎಲ್‌ಗೆ ತೀವ್ರ ಸ್ಪರ್ಧೆ ನೀಡಬಹುದು ಎಂದು ಅಂದಾಜಿಸಲಾಗಿದೆ. ಆದರೆ, ಭಾರತೀಯ ಆಟಗಾರರು ಇದರಲ್ಲಿ ಪಾಲ್ಗೊಳ್ಳಬಹುದೇ? ಐಸಿಸಿ ಅನುಮತಿ ನೀಡುತ್ತದೆಯೇ? ಎಂಬ ಪ್ರಶ್ನೆಗಳು ಅಭಿಮಾನಿಗಳಲ್ಲಿ ಮೂಡಿವೆ. ಮುಂದೇನು ನಡೆಯುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ!

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!

You cannot copy content of this page