![GPS-based GNSS toll system GPS-based GNSS toll system](https://kannadatopnews.com/wp-content/uploads/2025/02/Photoshop_Online-news-copy-68.jpg)
ಭಾರತದಲ್ಲಿ ಟೋಲ್ ಸಂಗ್ರಹ ವ್ಯವಸ್ಥೆಯನ್ನು ಮತ್ತಷ್ಟು ಸುಧಾರಿಸುವ ಉದ್ದೇಶದಿಂದ ಜಿಪಿಎಸ್ ಆಧಾರಿತ ಜಿಎನ್ಎಸ್ಎಸ್ (GNSS) ಟೋಲ್ ಸಿಸ್ಟಮ್ ಜಾರಿಗೆ ತರಲು ಸರ್ಕಾರ ಸಿದ್ಧತೆ ನಡೆಸುತ್ತಿದೆ. ಇದರ ಜೊತೆಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಹೊಸ ಟೋಲ್ ಟ್ಯಾಕ್ಸ್ ಸ್ಮಾರ್ಟ್ ಕಾರ್ಡ್ (New Toll Tax Smart Card) ತರುವ ಯೋಜನೆ ಘೋಷಿಸಿದ್ದಾರೆ.
ಈ ಟೋಲ್ ಟ್ಯಾಕ್ಸ್ ಸ್ಮಾರ್ಟ್ ಕಾರ್ಡ್ ಎಲ್ಲ ಹೆದ್ದಾರಿ ಟೋಲ್ ಬೂತ್‌ಗಳಲ್ಲಿ ಅನ್ವಯವಾಗಲಿದ್ದು, ವಾಹನ ಮಾಲೀಕರಿಗೆ ಸುಗಮ ಪಾವತಿಗಾಗಿ ಜಾರಿಗೆ ತರಲಾಗಿದೆ. ಈ ಕಾರ್ಡ್ ಬಳಸಿದವರಿಗೆ ಟೋಲ್ ಶುಲ್ಕದಲ್ಲಿ ಕಡಿತ (ಡಿಸ್ಕೌಂಟ್) ಸಿಗಲಿದೆ. ವಿಶೇಷವಾಗಿ ಪ್ರತಿದಿನ ಅಥವಾ ಹೆಚ್ಚು ಬಾರಿ ಟೋಲ್ ಬಳಿಯುವವರಿಗೆ ಇದು ತುಂಬಾ ಅನುಕೂಲಕರ.
ಈ ಸ್ಮಾರ್ಟ್ ಕಾರ್ಡ್ ಒಂದರ ಹೋಲಿಕೆಯನ್ನು ಟೋಲ್ ಪಾಸ್‌ನೊಂದಿಗೆ ಮಾಡಬಹುದು. ಇದು ತಿಂಗಳು, 6 ತಿಂಗಳು ಅಥವಾ ವರ್ಷಾವಧಿಗೆ ರೀಚಾರ್ಜ್ ಮಾಡಿಕೊಳ್ಳಬಹುದಾಗಿದ್ದು, ವಾಣಿಜ್ಯ ವಾಹನಗಳ ಮಾಲೀಕರಿಗೆ ಹೆಚ್ಚು ಲಾಭಕರ.
GNSS ಟೋಲ್ ವ್ಯವಸ್ಥೆ ಜಾರಿಗೆ ಬಂದರೆ, ಪಾರಂಪರಿಕ ಟೋಲ್ ಬೂತ್, ಗೇಟ್, ಸ್ಕ್ಯಾನರ್ ಮುಂತಾದವು ಅವಶ್ಯಕವಿರುವುದಿಲ್ಲ. ಜಿಪಿಎಸ್ ಮೂಲಕ ಎಷ್ಟು ಕಿಲೋಮೀಟರ್ ಸಂಚರಿಸಿದ್ದೀರಿ ಎಂಬುದರ ಆಧಾರದ ಮೇಲೆ ಟೋಲ್ ಶುಲ್ಕವನ್ನು ನಿಗದಿಪಡಿಸಲಾಗುತ್ತದೆ. ಇದು ವಾಹನ ದಟ್ಟಣೆ ಕಡಿಮೆ ಮಾಡುವುದು, ಟೋಲ್ ಪಾವತಿ ಪ್ರಕ್ರಿಯೆಯನ್ನು ನೇರಗೊಳಿಸುವುದು ಮತ್ತು ಕಂದಾಯ ಸೋರಿಕೆಯನ್ನು ತಡೆಗಟ್ಟುವ ಉದ್ದೇಶ ಹೊಂದಿದೆ.
ಈ ಹೊಸ ವ್ಯವಸ್ಥೆಯನ್ನು ಈಗಾಗಲೇ ಹರಿಯಾಣದ ಪಾನಿಪತ್-ಹಿಸಾರ್ ಹೆದ್ದಾರಿಯಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತಂದು ಪರೀಕ್ಷಿಸಲಾಗುತ್ತಿದೆ. ಶೀಘ್ರದಲ್ಲೇ ಇಡೀ ದೇಶದಲ್ಲಿ ಇದನ್ನು ಅಳವಡಿಸುವ ಸಾಧ್ಯತೆಯಿದೆ.