ಭಾರತ ಮತ್ತು ಬ್ರಿಟನ್ ನಡುವೆ ಇತ್ತೀಚೆಗೆ ನಡೆದ ವಾಣಿಜ್ಯ ಒಪ್ಪಂದ (CETA) ಎರಡು ದೇಶಗಳ ನಡುವಿನ ಬಾಂಧವ್ಯವನ್ನು (New trade deal) ಬಲಪಡಿಸಿದೆ. ಈ ಒಪ್ಪಂದದ ಫಲಿತಾಂಶವಾಗಿ, ಬ್ರಿಟನ್‌ನಿಂದ ಭಾರತಕ್ಕೆ ಆಮದು ಮಾಡುವ ಐಷಾರಾಮಿ ಕಾರುಗಳು ಹಾಗೂ ಇತರ ವಸ್ತುಗಳ ಮೇಲಿನ ಸುಂಕವು ನಿಧಾನವಾಗಿ ಕಡಿಮೆಯಾಗಲಿದೆ.
ಈ ಒಪ್ಪಂದದ ಪ್ರಕಾರ
- ಈಗ ಬ್ರಿಟಿಷ್ ಕಾರುಗಳ ಮೇಲೆ 110% ಇದ್ದ ಆಮದು ಸುಂಕವನ್ನು 10%ವರೆಗೆ ಇಳಿಸಲಾಗುತ್ತದೆ.
- ಇದರಿಂದ ಲ್ಯಾಂಡ್ ರೋವರ್, ಜಾಗ್ವಾರ್, ರೋಲ್ಸ್ ರಾಯ್ಸ್, ಬೆಂಟ್ಲಿ ಮುಂತಾದ ಕಾರುಗಳು ಭಾರತದಲ್ಲಿ ಕಡಿಮೆ ಬೆಲೆಯಲ್ಲಿ ಲಭ್ಯವಾಗುವ ಸಾಧ್ಯತೆ ಇದೆ.
- ಈ ಬದಲಾವಣೆಯಿಂದ ಮಧ್ಯಮ ಮತ್ತು ಮೇಲ್ಮಧ್ಯಮ ವರ್ಗದ ಗ್ರಾಹಕರಿಗೆ ಐಷಾರಾಮಿ ಕಾರುಗಳು ಕೈಗೆಟುಕುವಂತಾಗಲಿವೆ.
- ಇದೀಗ 6,500ಕ್ಕಿಂತ ಕಡಿಮೆ ಯೂನಿಟ್ ಮಾರಾಟವಾದ ಬ್ರಿಟಿಷ್ ಕಾರುಗಳಿಗೆ ಭವಿಷ್ಯದಲ್ಲಿ ಭಾರತದಲ್ಲಿ ಹೆಚ್ಚಿನ ಬೇಡಿಕೆ ಬರಬಹುದು.
ಇತರೆ ಪ್ರಮುಖ ಬದಲಾವಣೆಗಳು
- ಸೌಂದರ್ಯ ಉತ್ಪನ್ನಗಳು, ಚಾಕೊಲೆಟ್, ಬಿಸ್ಕತ್ತು, ಮೀನು ಇತ್ಯಾದಿಗಳ ಮೇಲಿನ ಸುಂಕ ಕಡಿಮೆಯಾಗಲಿದೆ.
- ಬೆಳ್ಳಿಯ ಮೇಲಿನ ಸುಂಕ 10 ವರ್ಷಗಳಲ್ಲಿ ಶೂನ್ಯಕ್ಕೆ ಇಳಿಯಲಿದೆ.
- ಲೆನ್ಸ್, ಸೂಕ್ಷ್ಮದರ್ಶಕ, ವೈದ್ಯಕೀಯ ಉಪಕರಣಗಳ ಮೇಲೆ ಶೇ.11-13.75ರ ಸುಂಕ ಶೂನ್ಯವಾಗಲಿದೆ.
- ವಿದ್ಯುತ್ ವಾಹನಗಳ ಮೇಲಿನ ಸುಂಕ ಶೇ.110ರಿಂದ ಶೇ.10ಕ್ಕೆ ಇಳಿಯಲಿದೆ.
- ಬ್ರಿಟಿಷ್ ವಿಸ್ಕಿಯ ಮೇಲಿನ ಸುಂಕ ಶೇ.150ರಿಂದ ಶೇ.75ಕ್ಕೆ, ನಂತರ ಶೇ.40ಕ್ಕೆ ಇಳಿಯಲಿದೆ.
- ಈ ಒಪ್ಪಂದದಿಂದ ಭಾರತಕ್ಕೆ ಹೆಚ್ಚು ಗುಣಮಟ್ಟದ ವಿದೇಶಿ ಉತ್ಪನ್ನಗಳು ಅಗ್ಗದ ದರದಲ್ಲಿ ಲಭ್ಯವಾಗಲಿವೆ.
ಭಾರತ-ಬ್ರಿಟನ್ ಹೊಸ ವ್ಯಾಪಾರ ಒಪ್ಪಂದದ ಮೂಲಕ ಭಾರತೀಯ ಗ್ರಾಹಕರಿಗೆ ಐಷಾರಾಮಿ ಬ್ರಿಟಿಷ್ ಕಾರುಗಳು ಮತ್ತು ಇತರ ವಸ್ತುಗಳು ಕಡಿಮೆ ದರದಲ್ಲಿ ಲಭ್ಯವಾಗಲಿವೆ. ಇದು ದೀರ್ಘಕಾಲದ ಆರ್ಥಿಕ ಪಾಲುದಾರಿಕೆಗೆ ದಾರಿ ತೆರೆಯಲಿದೆ.