Search
WhatsApp alerts

Home › News

ಅಮೆರಿಕದ ಹೊಸ ಮಸೂದೆ ಅನುಮೋದನೆ: ಭಾರತೀಯರಿಗೆ ಹೆಚ್ಚುವರಿ ತೆರಿಗೆ, ವೀಸಾ ನಿಯಮಗಳು ಕಠಿಣ

administrator · Published

Trump

Washington: ಅಮೆರಿಕದ ಸಂಸತ್ತಿನ ಎರಡೂ ಸದನಗಳು ಇದೀಗ ‘ಒನ್ ಬಿಗ್ ಬ್ಯೂಟಿಫುಲ್ ಬಿಲ್‘ (One Big Beautiful Bill) ಎನ್ನುವ ಮಹತ್ವದ ಮಸೂದೆಯನ್ನು ಅಂಗೀಕರಿಸಿವೆ. ಇದು ಅಮೆರಿಕದ ಹಲವಾರು ಕ್ಷೇತ್ರಗಳಲ್ಲಿ ಬದಲಾವಣೆ ತರಲಿದ್ದು, ಭಾರತೀಯರ ಮೇಲೂ ನೇರ ಪರಿಣಾಮ ಬೀರುತ್ತದೆ.

ಈ ಮಸೂದೆ ತೆರಿಗೆ, ವಲಸೆ, ವೇತನ, ಗಡಿ ಭದ್ರತೆ, ಆರೋಗ್ಯ ಸೇವೆ ಮತ್ತು ಸಾಮಾಜಿಕ ಭದ್ರತೆ ಮುಂತಾದ ವಿಷಯಗಳಲ್ಲಿ ಬದಲಾವಣೆಗಳನ್ನು ಮಾಡುತ್ತದೆ. ಹಲವಾರು ದಿನಗಳ ಚರ್ಚೆಯ ಬಳಿಕ, ಸೆನೆಟ್‌ನಲ್ಲಿ ಸಮಮಟ್ಟದ ಮತಗಳು (50-50) ಬಂದಾಗ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರ ನಿರ್ಣಯಾತ್ಮಕ ಮತದ ಮೂಲಕ ಮಸೂದೆ ಅಂಗೀಕಾರವಾಯಿತು.

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಮಸೂದೆಯನ್ನು ಶ್ಲಾಘಿಸಿದ್ದು, ಇದು ಅಮೆರಿಕದ ಜನತೆಗೆ ಲಾಭದಾಯಕವೆಂದು ತಿಳಿಸಿದ್ದಾರೆ. ಜುಲೈ 4ರೊಳಗೆ ಈ ಮಸೂದೆ ಸಂಪೂರ್ಣ ಜಾರಿಗೆ ಬರಲಿದೆ ಎಂದು ಅವರು ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.

ಭಾರತೀಯರ ಮೇಲೆ ಪರಿಣಾಮಗಳು

ಹಣ ಕಳುಹಿಸುವದಕ್ಕೆ ಹೆಚ್ಚುವರಿ ತೆರಿಗೆ: ಅಮೆರಿಕದಲ್ಲಿರುವ ಭಾರತೀಯರು ತಮ್ಮ ಕಮ್ಮಲಿಸಿದ ಹಣವನ್ನು ಭಾರತಕ್ಕೆ ಕಳುಹಿಸಿದರೆ 3.5% ತೆರಿಗೆ ವಿಧಿಸಲಾಗುತ್ತದೆ. ಉದಾಹರಣೆಗೆ, ₹83,000 ಕಳುಹಿಸಿದರೆ ₹2,900 ತೆರಿಗೆ ಇರುತ್ತದೆ. ಇದು H1B, L-1, F-1 ವೀಸಾ ಅಥವಾ ಗ್ರೀನ್ ಕಾರ್ಡ್ ಹೊಂದಿರುವವರಿಗೆ ಅನ್ವಯಿಸುತ್ತದೆ.

ವಲಸಿಗರ ಮೇಲೆ ಹೊಸ ನಿಯಮಗಳು: ಇನ್ನು ಮುಂದೆ ಅಮೆರಿಕಕ್ಕೆ ವಲಸೆ ಹೋಗುವ ವ್ಯಕ್ತಿ, ತನ್ನ ಹೆಂಡತಿ ಮತ್ತು ಮಕ್ಕಳನ್ನು ಮಾತ್ರ ಕರೆದುಕೊಂಡು ಹೋಗಬಹುದಾಗಿದೆ. ಇತರ ಕುಟುಂಬ ಸದಸ್ಯರಿಗೆ ಅವಕಾಶವಿಲ್ಲ.

ಗ್ರೀನ್ ಕಾರ್ಡ್ ಲಾಟರಿ ರದ್ದು: ಡೈವರ್ಸಿಟಿ ವೀಸಾ ಲಾಟರಿ ವ್ಯವಸ್ಥೆ ಕೂಡ ರದ್ದುಗೊಳಿಸಲಾಗಿದೆ. ಈ ಮೂಲಕ ಕಡಿಮೆ ಸಂಖ್ಯೆಯಲ್ಲಿ ವಲಸೆ ಬರುವ ದೇಶಗಳ ಜನರಿಗೆ ಇದುವರೆಗೆ ಸಿಕ್ಕುತ್ತಿದ್ದ ಅವಕಾಶ ಈಗ ಇಲ್ಲ.

ಬುದ್ಧಿವಂತರಿಗೆ ಮಾತ್ರ ವೀಸಾ: ಇನ್ನು ಮುಂದೆ ಅಮೆರಿಕಕ್ಕೆ ವಲಸೆ ಪಡೆಯಲು ಉತ್ತಮ ಶಿಕ್ಷಣ ಮತ್ತು ಕೌಶಲ್ಯ ಅಗತ್ಯವಿದೆ. ಸಾಮಾನ್ಯ ಅರ್ಹತೆ ಇರುವವರಿಗೆ ವೀಸಾ ಸಿಗುವುದು ಕಷ್ಟವಾಗಲಿದೆ.

ಈ ಮಸೂದೆ ಭಾರತದಿಂದ ಅಮೆರಿಕಕ್ಕೆ ಹೋಗುವ ವಲಸಿಗರಿಗೆ ಹೊಸ ಸವಾಲುಗಳನ್ನು ತಂದಿದ್ದು, ಉನ್ನತ ಅರ್ಹತೆ ಮತ್ತು ಯೋಜನೆಯೊಂದಿಗೆ ಮಾತ್ರ ವಿದೇಶಿಗರು ಮುಂದುವರಿಯಬೇಕಾಗಿದೆ.

For Daily Updates WhatsApp ‘HI’ to 7406303366

Read next

ಹೃದಯದ ಆರೋಗ್ಯ ಕಾಪಾಡಿ: ವಿಶ್ವ ಹೃದಯ ದಿನದಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಚೇತನ್ ಕಿವಿಮಾತು

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಆಗ್ನೇಯ ಪದವೀಧರ ಕ್ಷೇತ್ರ ಚುನಾವಣೆಗೆ ಸಹಾಯವಾಣಿ ಕೇಂದ್ರ ಸ್ಥಾಪನೆ

ಹಿರಿಯ ನಾಗರಿಕರ ಕುಂದುಕೊರತೆ ಪರಿಹಾರಕ್ಕೆ ಅಧಿಕಾರಿಗಳಿಗೆ ಡಿಸಿ ಕಟ್ಟುನಿಟ್ಟಿನ ಸೂಚನೆ

ಕೆಎಸ್‌ಆರ್‌ಟಿಸಿಯಲ್ಲಿ ಅಪ್ರೆಂಟೀಸ್ ತರಬೇತಿಗೆ ಅರ್ಜಿ ಆಹ್ವಾನ

You cannot copy content of this page