back to top
19.9 C
Bengaluru
Friday, August 1, 2025
HomeAutoApril ನಿಂದ ಹೊಸ Vehicle Price ಏರಿಕೆ: ಖರೀದಿಗೆ ಜನರು ಹಿಂದೇಟು!

April ನಿಂದ ಹೊಸ Vehicle Price ಏರಿಕೆ: ಖರೀದಿಗೆ ಜನರು ಹಿಂದೇಟು!

- Advertisement -
- Advertisement -

Bengaluru: ಕರ್ನಾಟಕದಲ್ಲಿ ದಿನೇ ದಿನೇ ಬೆಲೆ ಏರಿಕೆಯಿಂದ ಜನತೆ ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಈಗ ಅದರ ಜೊತೆಗೆ ಹೊಸ ವಾಹನ ಖರೀದಿಯ (Vehicle Prices) ಮೇಲೂ ಹೊರೆ ಹೆಚ್ಚಾಗಿದೆ. ಏಪ್ರಿಲ್ ತಿಂಗಳಿನಿಂದ ರಾಜ್ಯದಲ್ಲಿ ಹೊಸ ವಾಹನಗಳ ಬೆಲೆ ಗಂಭೀರವಾಗಿ ಹೆಚ್ಚಾಗಲಿದ್ದು, ಜನಸಾಮಾನ್ಯರಿಗೆ ದೊಡ್ಡ ಆಘಾತವಾಗಿದೆ.

ರಾಜ್ಯ ಸರ್ಕಾರ ಈಗಾಗಲೇ ಮಾರ್ಚ್ ತಿಂಗಳಿನಿಂದ ಹೆಚ್ಚುವರಿ ಸೆಸ್ ವಿಧಿಸಿದೆ. ಇದರ ಜೊತೆಗೆ, ಉಕ್ಕು ಮತ್ತು ವಾಹನ ಬಿಡಿಭಾಗಗಳ ಆಮದು ದರ ಏರಿಕೆಯಾಗುತ್ತಿರುವುದರಿಂದ, ವಾಹನಗಳ ದರ 3% ರಿಂದ 4% ವರೆಗೆ ಹೆಚ್ಚಾಗಲಿದೆ.

ದ್ವಿಚಕ್ರವಾಹನ ಮತ್ತು ಕಾರುಗಳ ಮೇಲೆ ಪ್ರಭಾವ

  • ದ್ವಿಚಕ್ರವಾಹನಗಳ ಬೆಲೆ ₹2,000 – ₹3,000 ವರೆಗೆ ಹೆಚ್ಚಾಗುವ ಸಾಧ್ಯತೆ.
  • ಆಟೋ ರಿಕ್ಷಾಗಳ ದರ ₹5,000 ಹೆಚ್ಚಾಗಲಿದೆ.
  • ಕಾರುಗಳ ಬೆಲೆಯಲ್ಲಿ 2% – 3% ಹೆಚ್ಚಳ ಸಾಧ್ಯ.
  • ಉದಾಹರಣೆಗೆ,
  • ₹5 ಲಕ್ಷ ಕಾರಿನ ಬೆಲೆ ₹15,000 ಹೆಚ್ಚಳ.
  • ₹10 ಲಕ್ಷ ಕಾರಿಗೆ ₹30,000 ಹೆಚ್ಚಳ.

ರಾಜ್ಯ ಸರ್ಕಾರದ ಹೆಚ್ಚುವರಿ ಸೆಸ್ ಪರಿಣಾಮವಾಗಿ, ದ್ವಿಚಕ್ರ ವಾಹನಗಳಿಗೆ ₹500, ಕಾರುಗಳಿಗೆ ₹1,000 ಹೆಚ್ಚುವರಿ ತೆರಿಗೆ ವಿಧಿಸಲಾಗಿದೆ. ಇದರ ಪರಿಣಾಮವಾಗಿ, ಜನರು ಹೊಸ ವಾಹನ ಖರೀದಿಗೆ ಹಿಂದೇಟು ಹಾಕಬಹುದು ಎಂದು ಕರ್ನಾಟಕ ರಾಜ್ಯ ಟ್ಯಾಕ್ಸಿ ಓನರ್ ಅಸೋಸಿಯೇಷನ್ ಅಧ್ಯಕ್ಷ ರಾಮಕೃಷ್ಣ ಹೊಳ್ಳ ಅಭಿಪ್ರಾಯ ಪಟ್ಟಿದ್ದಾರೆ.

ನಂತರದ ತಿಂಗಳುಗಳಲ್ಲಿ ಬೆಲೆ ಏರಿಕೆಯಾಗುವ ಕಾರಣ, ಜನರು ಈಗಾಗಲೇ ಮಾರ್ಚ್ ಅಂತ್ಯದ clearance offer ಗಳ ಲಾಭ ಪಡೆಯಲು ಮುಂದಾಗುತ್ತಿದ್ದಾರೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page