IPL 2025: ಲಕ್ನೋ ಸೂಪರ್ ಜೈಂಟ್ಸ್ ತಂಡದ ನಿಕೋಲಸ್ ಪೂರನ್ (Nicholas Pooran) ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. 30 ಎಸೆತಗಳಲ್ಲಿ 75 ರನ್ ಗಳಿಸಿದ ಪೂರನ್, 7 ಸಿಕ್ಸ್ ಸಿಡಿಸಿದರು.
ಟಿ20 ಕ್ರಿಕೆಟ್ ದಾಖಲೆಯ ಸಾಧನೆ: ಈ ಏಳು ಸಿಕ್ಸ್ ಗಳೊಂದಿಗೆ ಪೂರನ್ ಟಿ20 ಕ್ರಿಕೆಟ್ ನಲ್ಲಿ 600 ಸಿಕ್ಸರ್ ಗಡಿ ದಾಟಿದ 4ನೇ ಆಟಗಾರರಾದರು.
ಅತ್ಯಧಿಕ ಸಿಕ್ಸ್ ಬಾರಿಸಿದ ಆಟಗಾರರು
- 1. ಕ್ರಿಸ್ ಗೇಲ್ – 1056 ಸಿಕ್ಸರ್
- 2. ಕೀರನ್ ಪೊಲಾರ್ಡ್ – 908 ಸಿಕ್ಸರ್
- 3. ಆ್ಯಂಡ್ರೆ ರಸೆಲ್ – 733 ಸಿಕ್ಸರ್
- 4. ನಿಕೋಲಸ್ ಪೂರನ್ – 606 ಸಿಕ್ಸರ್
ಪೂರನ್, ಟಿ20 ಕ್ರಿಕೆಟ್ ನಲ್ಲಿ ಅತ್ಯಧಿಕ ಸಿಕ್ಸರ್ ಬಾರಿಸಿದ 4ನೇ ಬ್ಯಾಟರ್ ಆಗಿ ಹೆಸರಿನ ದಾಖಲಿಸಿದರು.