New Delhi: EaseMyTrip ಸಂಸ್ಥೆಯ ಸಹ-ಸಂಸ್ಥಾಪಕ ನಿಶಾಂತ್ ಪಿಟ್ಟಿ (Nishant Pitti) ಅವರು ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ CEO ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಇಂದು (ಜನವರಿ 1) ರಿಂದ ಅವರು ಅಧಿಕಾರದಿಂದ ಹೊರಟಿದ್ದಾರೆ. ಅವರ ಸಹೋದರ ಮತ್ತು ಮತ್ತೊಬ್ಬ ಸಹ-ಸಂಸ್ಥಾಪಕ ರಿಕಾಂತ್ ಪಿಟ್ಟಿ ಅವರನ್ನು ನೂತನ ಸಿಇಒ ಆಗಿ ನೇಮಿಸಲಾಗಿದೆ.
ನಿಶಾಂತ್ ಪಿಟ್ಟಿ ಅವರು ಡಿಸೆಂಬರ್ 30ರಂದು ಶೇ. 14ರಷ್ಟು ಷೇರುಗಳನ್ನು ಮಾರಾಟ ಮಾಡುವ ನಿರ್ಧಾರವನ್ನು ಘೋಷಿಸಿದ್ದರು. ಆದರೆ, ಶೇ. 1.4ರಷ್ಟು (4.99 ಕೋಟಿ ಷೇರುಗಳು) ಮಾತ್ರ ಮಾರಾಟವಾಗಿದ್ದು, ಈ ಮೂಲಕ ಅವರು ₹78.32 ಕೋಟಿ ಗಳಿಸಿದ್ದಾರೆ.
ಡಿಸೆಂಬರ್ 31ರಂದು ನಡೆದ ಬ್ಲಾಕ್ ಡೀಲ್‌ನಲ್ಲಿ ಅರುಣಾಬೆನ್ ಸಂಜಯ್ ಕುಮಾರ್ ಭಾಟಿಯಾ ಅವರು ಮಾತ್ರ 2.40 ಕೋಟಿ ಷೇರುಗಳನ್ನು ₹38.06 ಕೋಟಿ ಮೊತ್ತಕ್ಕೆ ಖರೀದಿಸಿದ್ದಾರೆ.
ಈ ಮಾರಾಟದ ನಂತರ, ನಿಶಾಂತ್ ಅವರ ಷೇರುಪಾಲು ಶೇ. 14.21ರಿಂದ ಶೇ. 12.8ಕ್ಕೆ ಇಳಿಯಿತು. ಸಂಸ್ಥೆಯ ಒಟ್ಟಾರೆ ಪ್ರೊಮೋಟರ್ ಗಳ ಷೇರುಪಾಲು ಶೇ. 50ಕ್ಕಿಂತ ಕಡಿಮೆಯಾಗಿದೆ, ಸಾರ್ವಜನಿಕ ಹೂಡಿಕೆದಾರರ ಪಾಲು ಶೇ. 44.14 ಆಗಿದೆ.
ಪ್ರೊಮೋಟರ್ ಗಳ ಷೇರುಪಾಲು
- ರಿಕಾಂತ್ ಪಿಟ್ಟಿ: ಶೇ. 25.88
- ನಿಶಾಂತ್ ಪಿಟ್ಟಿ: ಶೇ. 12.8
- ಪ್ರಶಾಂತ್ ಪಿಟ್ಟಿ: ಶೇ. 10.29
ನಿಶಾಂತ್ ಪಿಟ್ಟಿಯ ಷೇರು ಮಾರಾಟ
- 2022: ಶೇ. 5 ಮಾರಾಟ
- 2023: ಶೇ. 4.5 ಮಾರಾಟ
- 2024: ಶೇ. 5 ಮಾರಾಟ