Nissan Magnite ಜನಪ್ರಿಯ SUV ಕಾರು ಆಗಿದ್ದು, ಆಕರ್ಷಕ ವಿನ್ಯಾಸ ಮತ್ತು ವೈಶಿಷ್ಟ್ಯಗಳೊಂದಿಗೆ ಉತ್ತಮ ಮಾರಾಟ ಸಾಧಿಸಿದೆ. ಫೆಬ್ರವರಿ ತಿಂಗಳಲ್ಲಿ 2,328 ಯುನಿಟ್ ಮಾರಾಟಗೊಂಡಿವೆ.
ಹೊಸ Nissan Magnite ಎಸ್ಯುವಿಯ ಬಹುತೇಕ ರೂಪಾಂತರಗಳ ಬೆಲೆ ರೂ.4,000 ಹೆಚ್ಚಾಗಿದೆ. ಜನವರಿ 31ರಿಂದ ಬೆಲೆ ರೂ.22,000 ವರೆಗೆ ಹೆಚ್ಚಳಗೊಂಡಿತ್ತು. ಸದ್ಯ, ಹೊಸ ಮಾದರಿಯ ಎಕ್ಸ್-ಶೋರೂಂ ಬೆಲೆ ರೂ.6.14 ಲಕ್ಷದಿಂದ ರೂ.11.76 ಲಕ್ಷವರೆಗೆ ಇದೆ.
ರೂಪಾಂತರಗಳು: ವಿಸಿಯಾ, ವಿಸಿಯಾ ಪ್ಲಸ್, ಅಸೆಂಟಾ, ಎನ್-ಕನೆಕ್ಟಾ, ಟೆಕ್ನಾ, ಟೆಕ್ನಾ ಪ್ಲಸ್ ಎಂಬ 6 ವೇರಿಯೆಂಟ್ ಆಯ್ಕೆಗಳು ಲಭ್ಯ. ಕಾರಿನ ವಿನ್ಯಾಸ ಆಕರ್ಷಕವಾಗಿದ್ದು, ಎಲ್ಇಡಿ headlamps, ಗ್ರಿಲ್, ಎಲ್ಇಡಿ ಟೈಲ್ ಲ್ಯಾಂಪ್ ಮತ್ತು 16-ಇಂಚಿನ ಡುಯಲ್-ಟೋನ್ ಅಲಾಯ್ ವೀಲ್ ಗಳನ್ನು ಒಳಗೊಂಡಿದೆ.
ಬಣ್ಣ ಆಯ್ಕೆ: ಸ್ಟಾರ್ಮ್ ವೈಟ್, ಬ್ಲೇಡ್ ಸಿಲ್ವರ್, ಸನ್ರೈಸ್ ಕೂಪರ್ ಆರೆಂಜ್, ಫ್ಲೇರ್ ಗಾರ್ನೆಟ್ ರೆಡ್, ಓನಿಕ್ಸ್ ಬ್ಲ್ಯಾಕ್, ಪರ್ಲ್ ವೈಟ್.
ಎಂಜಿನ್ ಮತ್ತು ಮೈಲೇಜ್: 1-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಮತ್ತು 1-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಆಯ್ಕೆ ಲಭ್ಯ. 5-ಸ್ಪೀಡ್ ಮ್ಯಾನುಯಲ್, 5-ಸ್ಪೀಡ್ ಆಟೋಮೆಟಿಕ್ ಹಾಗೂ ಸಿವಿಟಿ gearboxes ಆಯ್ಕೆಯೊಂದಿಗೆ 17.4 – 20 ಕಿ.ಮೀ ಪ್ರತಿ ಲೀಟರ್ ಮೈಲೇಜ್ ಕೊಡುತ್ತದೆ. 336 ಲೀಟರ್ ಬೂಟ್ ಸ್ಪೇಸ್ ಒಳಗೊಂಡಿದೆ.
ಸೌಲಭ್ಯಗಳು: 8-ಇಂಚಿನ ಟಚ್‌ಸ್ಕ್ರೀನ್ infotainment ಸಿಸ್ಟಮ್, 7-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ಪ್ಲೇ, ವೈರ್ಲೆಸ್ ಫೋನ್ ಚಾರ್ಜರ್, ಆಟೋಮೆಟಿಕ್ ಕ್ಲೈಮೇಟ್ ಕಂಟ್ರೋಲ್.
ಸುರಕ್ಷತೆ: 6-airbags, ESC, TPMS, 360-ಡಿಗ್ರಿ ಕ್ಯಾಮೆರಾ. ಮಹೀಂದ್ರಾ XUV 3XO ಈ ಕಾರಿನ ಪ್ರಮುಖ ಪ್ರತಿಸ್ಪರ್ಧಿಯಾಗಿದೆ.