back to top
25.9 C
Bengaluru
Tuesday, February 24, 2026
HomeBusinessಸಣ್ಣ ಸಾಲಗಳಿಗೆ ಹೆಚ್ಚುವರಿ ಶುಲ್ಕ ಬೇಡ: RBI ಕಡ್ಡಾಯ ಸೂಚನೆ

ಸಣ್ಣ ಸಾಲಗಳಿಗೆ ಹೆಚ್ಚುವರಿ ಶುಲ್ಕ ಬೇಡ: RBI ಕಡ್ಡಾಯ ಸೂಚನೆ

- Advertisement -
- Advertisement -

Bengaluru: ಬ್ಯಾಂಕುಗಳು ಆದ್ಯತಾ ವಲಯ ಸಾಲಗಳ (PSL loans) ಮೇಲೆ ಹೆಚ್ಚು ಶುಲ್ಕ ವಿಧಿಸಬಾರದು ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಸೂಚನೆ ನೀಡಿದೆ. ವಿಶೇಷವಾಗಿ ₹50,000ವರೆಗಿನ ಸಣ್ಣ ಸಾಲಗಳಿಗೆ ಹೆಚ್ಚುವರಿ ಶುಲ್ಕ ಹಾಕಬಾರದು ಎಂದು RBI ಸ್ಪಷ್ಟಪಡಿಸಿದೆ.

ಯಾವ ಶುಲ್ಕಗಳನ್ನು ವಿಧಿಸಬಹುದು?

  • ಬ್ಯಾಂಕುಗಳು ಬಡ್ಡಿ ಮತ್ತು ಪ್ರೋಸೆಸ್ ಶುಲ್ಕವನ್ನು ವಿಧಿಸಬಹುದು.
  • ಆದರೆ, ಅಡ್ಮಿನಿಸ್ಟ್ರೇಶನ್ ಫೀಸ್, ಸರ್ವೀಸ್ ಚಾರ್ಜ್, ಇನ್ಸ್ಪೆಕ್ಷನ್ ಫೀಸ್ ಮುಂತಾದ ಹೆಚ್ಚುವರಿ ಶುಲ್ಕಗಳನ್ನು ಸಣ್ಣ ಸಾಲಗಳಿಗೆ ವಿಧಿಸಬಾರದು.

ಆದ್ಯತಾ ವಲಯ ಸಾಲಗಳಲ್ಲಿ ಏನು ಸೇರುತ್ತದೆ?

ಕೃಷಿ, ಎಂಎಸ್ಎಂಇ, ರಫ್ತು, ಶಿಕ್ಷಣ, ಗೃಹಸಾಲ, ನವೀಕರಿಸಬಹುದಾದ ಇಂಧನ ಯೋಜನೆಗಳು, ದಲಿತರು, ಸಣ್ಣ ರೈತರು, ಮಹಿಳಾ ಸ್ವಸಹಾಯ ಸಂಘಗಳು ಮುಂತಾದವು ಈ ವಲಯಕ್ಕೆ ಸೇರುತ್ತವೆ.

ಆದರೆ, ಚಿನ್ನಾಭರಣ ಲೋನ್, ದೊಡ್ಡ ಕಾರ್ಪೊರೇಟ್ ಸಾಲ, ಪರ್ಸನಲ್ ಲೋನ್, ಕಾರ್ ಲೋನ್, ಐಷಾರಾಮಿ ಗೃಹ ಸಾಲ ಆದ್ಯತಾ ವಲಯ ಸಾಲಗಳಲ್ಲ ಎಂದು ಆರ್ಬಿಐ ಸ್ಪಷ್ಟಪಡಿಸಿದೆ.

ಬ್ಯಾಂಕುಗಳು ಗುರಿ ಮುಟ್ಟಲೇಬೇಕು!

  • ಬ್ಯಾಂಕುಗಳು ಕನಿಷ್ಠ 40% ಸಾಲಗಳನ್ನು ಆದ್ಯತಾ ವಲಯಕ್ಕೆ ನೀಡಲೇಬೇಕು ಎಂಬ ಗುರಿಯನ್ನು RBI ನಿಗದಿ ಮಾಡಿದೆ.
  • ಪ್ರತೀ ಕ್ವಾರ್ಟರ್‌ಗೆ ಈಗುರಿ ಮುಟ್ಟಿದ ಮಾಹಿತಿ ಸಲ್ಲಿಸುವುದು ಕಡ್ಡಾಯ.
  • ಗುರಿ ಪೂರೈಸಲು ವಿಫಲವಾದರೆ, ನಬಾರ್ಡ್ ಮತ್ತು ಇತರ ಅಭಿವೃದ್ಧಿ ನಿಧಿಗಳಿಗೆ ಹಣ ನೀಡಬೇಕು ಎಂಬ ನಿಯಮವಿದೆ.

ಬ್ಯಾಂಕುಗಳು ಈ ಮಾರ್ಗದರ್ಶಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು RBI ಸ್ಪಷ್ಟ ಸೂಚನೆ ನೀಡಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page