Bengaluru: ಕರ್ನಾಟಕದ ಸಣ್ಣ ವ್ಯಾಪಾರಿಗಳಿಗೆ UPI ಟ್ರಾನ್ಸಾಕ್ಷನ್ ಆಧಾರದ ಮೇಲೆ ಸೆಂಟ್ರಲ್ GST ಅಧಿಕಾರಿಗಳು ಟ್ಯಾಕ್ಸ್ ನೋಟೀಸ್ ನೀಡಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ತಿಳಿಸಿದ್ದಾರೆ.
ಅವರು ಲೋಕಸಭೆಯಲ್ಲಿ ಲಿಖಿತ ಉತ್ತರ ನೀಡಿ, ಕಳೆದ ತಿಂಗಳು ಬೆಂಗಳೂರಿನಲ್ಲಿ ನೀಡಿದ ನೋಟೀಸ್ಗಳು ರಾಜ್ಯ GST ಇಲಾಖೆಯಿಂದ ಹೊರಬಂದದ್ದಾಗಿದ್ದು, ಕೇಂದ್ರೀಯ GST ಅಧಿಕಾರಿಗಳ ಯಾವುದೇ ಪಾತ್ರವಿಲ್ಲ ಎಂದರು.
2024-25ರಲ್ಲಿ ಕರ್ನಾಟಕದಲ್ಲಿ 1,254 ತೆರಿಗೆ ವಂಚನೆ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು 39,577 ಕೋಟಿ ರೂ ವಂಚನೆ ನಡೆದಿದೆ. ಇದರಲ್ಲಿ 1,623 ಕೋಟಿ ರೂ ವಸೂಲಿ ಮಾಡಲಾಗಿದೆ. ಹಿಂದಿನ ವರ್ಷ 925 ಪ್ರಕರಣಗಳಲ್ಲಿ 7,202 ಕೋಟಿ ರೂ ವಂಚನೆ ಪತ್ತೆಯಾಗಿ 1,197 ಕೋಟಿ ರೂ ವಸೂಲಿ ಮಾಡಲಾಗಿತ್ತು.
2022-23ರಲ್ಲಿ 959 ಪ್ರಕರಣಗಳಿಂದ 25,839 ಕೋಟಿ ರೂ ವಂಚನೆ ಪತ್ತೆಯಾಗಿತ್ತು.