Bengaluru: ಜಗತ್ತು ಈಗ ಹೈಟೆಕ್ ಆಗಿದೆ. AI (ಕೃತಕ ಬುದ್ಧಿಮತ್ತೆ) ಬಂದ ನಂತರ ಅದು ಇನ್ನಷ್ಟು ವೇಗವಾಗಿ ಬೆಳೆದಿದೆ. ನೀವು ಎಂದಾದರೂ keyboard ಮತ್ತು ಮೌಸ್ ಇಲ್ಲದೆ laptop ಬಳಸುವುದನ್ನು ಊಹಿಸಿದ್ದೀರಾ? ಬರುವ 5 ವರ್ಷಗಳಲ್ಲಿ ಇದು ಸಾಧ್ಯವಾಗಲಿದೆ. 2030 ರೊಳಗೆ ಕೀಬೋರ್ಡ್ ಮತ್ತು ಮೌಸ್ ಅಗತ್ಯವಿಲ್ಲದ laptop ಬರುವುದಾಗಿ ಮೈಕ್ರೋಸಾಫ್ಟ್ ಕಂಪನಿ ಹೇಳಿದೆ.
ಈ laptop ಗಳು ನಿಮ್ಮ ಧ್ವನಿ ಮತ್ತು ಕೈ ಸನ್ನೆಗಳ ಮೂಲಕ ಕಾರ್ಯನಿರ್ವಹಿಸುತ್ತವೆ. ನೀವು ಮಾತಾಡಿ ಅಥವಾ ಕೈ ಹಾರಿಸಿ ಆಜ್ಞೆ ನೀಡಬಹುದು. ಡೇವಿಡ್ ವೆಸ್ಟನ್, ಮೈಕ್ರೋಸಾಫ್ಟ್ ಉಪಾಧ್ಯಕ್ಷರು, ಮುಂಬರುವ ದಿನಗಳಲ್ಲಿ ಕೀಬೋರ್ಡ್ ಮತ್ತು ಮೌಸ್ ಬಳಕೆ ಕಡಿಮೆಯಾಗುತ್ತದೆ ಎಂದು ಹೇಳಿದ್ದಾರೆ.
2030 ರೊಳಗೆ ಕಂಪ್ಯೂಟರ್ ಬಳಸುವ ರೀತಿಯೇ ಬದಲಾಗುತ್ತದೆ. ಕರ್ಸರ್ ಸರಿಸಲು ಕೀಬೋರ್ಡ್ ಬಳಸಬೇಕಾಗುವುದಿಲ್ಲ. ಬದಲಾಗಿ, ನಿಮ್ಮ ಧ್ವನಿ, ಕೈ ಸನ್ನೆಗಳು, ಕಣ್ಣುಗಳ ಮೂಲಕ ನಿಯಂತ್ರಿಸಬಹುದು. ಭವಿಷ್ಯದ ವಿಂಡೋಸ್ ಬಹು-ಮಾದರಿಯಾಗಿದೆ.
ಮೈಕ್ರೋಸಾಫ್ಟ್ ಇತ್ತೀಚೆಗೆ ‘ವಿಂಡೋಸ್ 2030 ವಿಷನ್’ ಎಂಬ ವಿಡಿಯೋ ಬಿಡುಗಡೆ ಮಾಡಿ, ಮುಂದಿನ ಐದು ವರ್ಷಗಳಲ್ಲಿ ವಿಂಡೋಸ್ ಬಳಕೆ ಹೇಗಿರುತ್ತದೆ ಎಂದು ತೋರಿಸಿದೆ. AI ಕಂಪ್ಯೂಟರ್‌ಗಳ ಜೊತೆ ನಮ್ಮ ಸಂವಹನ ಸುಲಭ ಮಾಡಲಿದೆ.
ಮೈಕ್ರೋಸಾಫ್ಟ್ ಹೇಳುವಂತೆ, ಜನರು ತಮ್ಮ laptop ಗಳ ಜೊತೆ ಸ್ನೇಹಿತರಂತೆ ಮಾತಾಡಬೇಕೆಂದು ಬಯಸುತ್ತದೆ. ಇದಕ್ಕಾಗಿ ಅವರು ಈ ತಂತ್ರಜ್ಞಾನಕ್ಕೆ ಲಕ್ಷಾಂತರ ರೂಪಾಯಿ ಹೂಡಿಕೆಗೆ ಮಾಡುತ್ತಿದ್ದಾರೆ. ಅವರು ವಿಂಡೋಸ್, ಆಫೀಸ್‌ಗಳಲ್ಲಿ ‘ಕೋಪಿಲಟ್’ ಎಂಬ AI ಚಾಟ್‌ಬಾಟ್ ಸೇರಿಸಿದ್ದಾರೆ. ನೀವು ‘ಹೇ ಕೋಪಿಲಟ್’ ಎಂದು ಹೇಳಿ ಕಂಪ್ಯೂಟರ್ ಜೊತೆ ಕೆಲಸ ಮಾಡಬಹುದು. ಇದು ಸೆಟ್ಟಿಂಗ್ ಗಳನ್ನು ಬದಲಾಯಿಸುವುದು, ಮಾಹಿತಿ ಹುಡುಕುವುದು ಸುಲಭ ಮಾಡುತ್ತದೆ.
ನೀವು ಡಿಸ್ಪ್ಲೇ ಮುಂದೆ ಕುಳಿತು ‘ಇಮೇಲ್ ತೆರೆಯಿರಿ’ ಎಂದರೆ, ಇಮೇಲ್ ನಿಮ್ಮ ಮುಂದೆ ತೆರೆಯಬಹುದು. ಅಥವಾ ಕೈ ಮುಟ್ಟದೆ, ಕೈ ಬೀಸುವ ಮೂಲಕ ಫೈಲ್ ಅನ್ನು ಮತ್ತೊಂದು ವಿಂಡೋಗೆ ತಳ್ಳಬಹುದು. AI ನಿಮ್ಮ ಫೈಲ್‌ಗಳು, ಅಪ್ಲಿಕೇಶನ್‌ಗಳು, ಮತ್ತು ಅಪಾಯಕಾರಿ ಲಿಂಕ್‌ಗಳನ್ನು ಗುರುತಿಸಿ ನಿಮ್ಮ ಕಂಪ್ಯೂಟರ್ ರಕ್ಷಿಸುತ್ತದೆ.
ಮೈಕ್ರೋಸಾಫ್ಟ್ ಹೇಳುತ್ತದೆ, ಭವಿಷ್ಯದಲ್ಲಿ ಪ್ರತಿಯೊಬ್ಬ ಬಳಕೆದಾರನಿಗೂ AI ಚಾಲಿತ ಭದ್ರತಾ ತಜ್ಞರು 24 ಗಂಟೆಗಳೂ ಕಂಪ್ಯೂಟರ್ ನೋಡಿಕೊಳ್ಳುತ್ತಾರೆ ಮತ್ತು ಬೆದರಿಕೆಗಳನ್ನ ತಡೆಯುತ್ತಾರೆ. ಅವರು ಮನುಷ್ಯನಂತೆ ನಿಮ್ಮೊಂದಿಗೆ ಮಾತಾಡಬಹುದು.